ಬೆರಗುಗೊಳಿಸಿದ ಮ್ಯಾಜಿಕ್ ಶೋ

0
393

ವರದಿ: ಅಂಜಲಿ ಕೆ.ಎಂ
ಚಿತ್ರಗಳು: ಚೈತನ್ಯ ಕುಡಿನಲ್ಲಿ
ಜಾದೂಗಾರ ನೋಡುಗರನ್ನು ಸೆಳೆಯುತ್ತಾನೆ. ಕುತೂಹಲ ಕೆರಳಿಸುತ್ತಾನೆ. ತನ್ನ ಚಮತ್ಕಾರಿಕ ಕಲೆಯ ರಹಸ್ಯವನ್ನು ಬಿಟ್ಟುಕೊಡದೆ ಮನರಂಜಿಸುತ್ತಾನೆ. ಆದರೆ, ಕೆಲವರು ಇದೇ ಕೌಶಲ್ಯವನ್ನು ಮೌಢ್ಯಕ್ಕಾಗಿ ಬಳಸಿಕೊಳ್ಳುತ್ತಾರೆ. ಇಂಥ ಮೌಢ್ಯದ ರಹಸ್ಯ ಕಾರ್ಯಸೂಚಿಗಳಿಗೆ ಒಳಗಾಗಬೇಡಿ ಎಂಬ ಸಂದೇಶವನ್ನು ಶಿವಮೊಗ್ಗದ ಪ್ರತಿಭೆ ಪ್ರಶಾಂತ ಹೆಗ್ಡೆ ಧರ್ಮಸ್ಥಳ ಲಕ್ಷದೀಪೋತ್ಸವದಲ್ಲಿ ಸಾರಿದರು.
 
 
ಶ್ರೀ ಧರ್ಮಸ್ಥಳ ಲಕ್ಷದೀಪೋತ್ಸವದ ಅಂಗವಾಗಿ ಶುಕ್ರವಾರ ವಸ್ತು ಪ್ರದರ್ಶನ ಮಂಟಪದಲ್ಲಿ ನಡೆದ ‘ಮ್ಯಾಜಿಕ್ ವಿಸ್ಮಯ’ ಹಲವರ ಮೆಚ್ಚುಗೆಗೆ ಪಾತ್ರವಾಯಿತು.
‘ದಿ ಗ್ರೇಟ್ ಇಂಡಿಯಾ ಸಾಫ್ಟ್ ಕ್ರಾಪಿಂಗ್’ ಎನ್ನುವ ಹೆಸರಿನಲ್ಲಿ ತುಂಡಾದ ಹಗ್ಗವನ್ನು ಮತ್ತೆ ಜೋಡಿಸುವ ವಿಸ್ಮಯವನ್ನು ಅನಾವರಣಗೊಳಿಸಿದರು. ಚಲನಚಿತ್ರ ನಟರಾದ ಸುದೀಪ್, ಶಾರುಖ್ ಖಾನ್ ಚಿತ್ರಪಟಗಳು ಕ್ಷಣಾರ್ಧದಲ್ಲಿ ಬದಲಾಗುವುದನ್ನು ಕಾಣಿಸಿದರು. ಪೆಟ್ಟಿಗೆಯೊಳಗೆ ಹುಡುಗಿಯನ್ನು ಕೂರಿಸಿ ತಲೆಗೆ ಚೂರಿಯಿಂದ ಚುಚ್ಚಿದರೂ ಏನೂ ಆಗದಂತೆ ಆ ಹುಡುಗಿ ಹೊರಬರುವ ಜಾದೂ ಗಮನ ಸೆಳೆಯಿತು.
 
 
ದೇಶಪ್ರೇಮದ ವೈಶಿಷ್ಟ್ಯತೆಯನ್ನೂ ಅವರ ಜಾದೂ ಪ್ರತಿಬಿಂಬಿಸಿತು. ದೇಶ ಕಾಯುವ ಯೋಧರಿಗಾಗಿ ಕೇಸರಿ, ಬಿಳಿ, ಹಸಿರು ಬಣ್ಣಗಳ ಬಟ್ಟೆಗಳನ್ನು ತೆಗೆದು ಅದನ್ನು ಧ್ವಜ ಮತ್ತು ಮಾಲೆಗಳನ್ನಾಗಿ ಪರಿವತರ್ಿಸಿದರು. ಭಾರತಾಂಬೆಯ ಭಾವಚಿತ್ರಕ್ಕೆ ಆ ಮಾಲೆಯನ್ನು ಹಾಕುವ ದೃಶ್ಯಗಳು ಆಪ್ತವೆನ್ನಿಸಿದವು.
ನೂರು ರೂಪಾಯಿ ನೋಟಿನ ಸಂಖ್ಯೆಯನ್ನು ಜನರಿಗೆ ತೋರಿಸಿ, ಅದನ್ನು ಸುಟ್ಟು ತದನಂತರ ಬಣ್ಣ ಬದಲಾಗುವ ದೃಶ್ಯವೂ ಇತ್ತು. ತದನಂತರ ಅದೇ ಸಂಖ್ಯೆಯ ನೋಟನ್ನು ತೋರ್ಪಡಿಸಿದರು.
 
‘ಮಾತನಾಡುವ ಬೊಂಬೆ- ಜಾದೂ’ ಕಾರ್ಯಕ್ರಮವನ್ನು ಮ್ಯಾಜಿಕ್ ಸುಮಾ ರಾಜ್ಕುಮಾರ್ ನಡೆಸಿಕೊಟ್ಟರು. ರಿಕ್ಕಿ ಎಂಬ ಗೊಂಬೆಯೊಂದಿಗೆ ಸಂಭಾಷಣಾ ಕೌಶಲ್ಯ ಮೆರೆದರು.

LEAVE A REPLY

Please enter your comment!
Please enter your name here