ಬೆನ್ನುನೋವಿಗೆ ಉಚಿತ ಮರ್ಮ ಚಿಕಿತ್ಸಾ ಶಿಬಿರ

0
311

ಉಡುಪಿ ಪ್ರತಿನಿಧಿ ವರದಿ
ಮಣಿಪಾಲದ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಶಲ್ಯತಂತ್ರ ವಿಭಾಗದ ವತಿಯಿಂದ ದಿನಾಂಕ.06.03.2017 ರಿಂದ ದಿನಾಂಕ.11.03.2017 ರವರೆಗೆ ಪೂರ್ವಾಹ್ನ 9.00 ರಿಂದ ಅಪರಾಹ್ನ 5.00 ಘಂಟೆಯವರೆಗೆ ಬೆನ್ನುನೋವಿಗೆ ಉಚಿತ ಮರ್ಮ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
 
 
 
ಶಿಬಿರವು ಸಂಸ್ಥೆಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಸತ್ಯನಾರಾಯಣ ಬಿ. ಯವರಿಂದ ಉದ್ಘಾಟನೆಗೊಂಡಿತು. ಸಂಸ್ಥೆಯ ವೈದ್ಯರಾದ ಡಾ. ದಿನೇಶ್ ನಾಯಕ್, ಡಾ. ರಜನೀಶ್ ವಿ. ಗಿರಿ, ಡಾ. ಗುರುರಾಜ ತಂತ್ರಿ, ಡಾ. ರಮೇಶ್ ಜಿ, ಡಾ. ಮೃದುಲ್ ಮೋಹನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಶಿಬಿರವು ದಿನಾಂಕ ರವರೆಗೆ 11.03.2017 ನಡೆಯಲಿದೆ.

LEAVE A REPLY

Please enter your comment!
Please enter your name here