ಬೆಣ್ಣೆತೋರಾ ಡ್ಯಾಂನಿಂದ ನೀರು ರಿಲೀಸ್

0
241

ಕಲಬುರಗಿ ಪ್ರತಿನಿಧಿ ವರದಿ
ಬೆಣ್ಣೆತೋರಾ ಡ್ಯಾಂನಿಂದ ಕಾಗಿಣಾ ನದಿಗೆ ನೀರು ಬಿಡಲಾಗಿದೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹೆರೂರು ಗ್ರಾಮದ ಬಳಿಯ ಡ್ಯಾಂನಿಂದ 6 ಗೇಟ್ ಮೂಲಕ ಕಾಗಿಣಾ ನದಿಗೆ ನೀರನ್ನು ರಿಲೀಸ್ ಮಾಡಲಾಗಿದೆ.
 
 
ಡ್ಯಾಂನಿಂದ 5873.4 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ನದಿಗೆ ಅಡ್ಡಲಾಗಿ ಕಟ್ಟಿರುವ 2 ಸೇತುವೆ ಜಲಾವೃತವಾಗಿದೆ. ಕಲಬುರಗಿಯ ಚಿತ್ತಾಪುರ ತಾಲೂಕಿನ ದಂಡೋತಿ ಸೇತುವೆ ಮತ್ತು ಸೇಡಣ ತಾಲೂಕಿನ ಮುಳಖೇಡ್ ಸೇತುವೆಗಳು ಜಲಾವೃತವಾಗಿದೆ. ಇದರಿಂದ ಸೇಡಂ, ಚಿತ್ತಾಪುರದಿಂದ ಕಲಬುರಗಿಗೆ ಸಂಪರ್ಕ ಕಡಿತವಾಗಿದೆ.
 
ಬೀದರ್ ನಲ್ಲಿ ಮಳೆ ಅವಾಂತರ
ಬೀದರ್ ಜಿಲ್ಲೆಯಾದ್ಯಂತ ವರುಣನ ಆರ್ಭಟ ಹೆಚ್ಚಾಗಿತ್ತು. ಭಾರೀ ಮಳೆಗೆ ಬೀದರ್ ತತ್ತರಿಸಿ ಹೋಗಿದೆ. ತಗ್ಗುಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
ಜಿಲ್ಲೆಯ ಕಮಠಾಣ ಗ್ರಾಮದಲ್ಲಿ 2 ಮನೆಗೋಡೆ ಕುಸಿದಿದೆ. ಭಾಲ್ಕಿ ತಾಲೂಕಿನಲ್ಲಿ ಹಳ್ಳಗಳು ತುಂಬಿಹರಿಯುತ್ತಿದೆ. ಮಳೆಯಿಂದ ಸಾವಿರಾರು ಹೆಕ್ಟೇರ್ ಪ್ರದೇಶ ಜಲಾವೃತವಾಗಿದೆ. ಇದರಿಂದ ಸೋಯಾ, ಉದ್ದು ಬೆಳೆ ಸಂಪೂರ್ಣ ನಾಶವಾಗಿದೆ.

LEAVE A REPLY

Please enter your comment!
Please enter your name here