ಬೆಚ್ಚಿಬಿತ್ತು ಮೂಡುಬಿದಿರೆ

0
3505

ಮಳೆಗಾಲ ಸುರುವಾಗುತ್ತಲೇ ಮೂಡುಬಿದಿರೆಯ ಮಂದಿ ಬೆಚ್ಚಿಬೀಳುವ ಕ್ಷಣ ಬಂದು ನಿಂತಿದೆ. ಮೂಡುಬಿದಿರೆ ತಾಲೂಕು ವ್ಯಾಪ್ತಿಯ ಇಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಇದೀಗ ಅವರಿದ್ದ ಪ್ರದೇಶವನ್ನು ಕಂಟೈನ್ಮೆಂಟ್‌ ಝೋನ್‌ ಎಂದು ಪರಿಗಣಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಮೂಡುಬಿದಿರೆ ತಾಲೂಕಿನ ಬೆಳುವಾಯಿ ಗ್ರಾಮದ ನವಗ್ರಾಮ ಕಾಲೋನಿಯನ್ನು ಆಕ್ಟಿವ್‌ ಕಂಟೈನ್ಮೆಂಟ್‌ ಝೋಜ್‌ ಎಂದು ಜಿಲ್ಲಾಧಿಕಾರಿ ಘೋಷಿಸಿ ಆದೇಶಿಸಿದ್ದಾರೆ. ಈ ಪ್ರದೇಶದಲ್ಲಿದ್ದ ಪೇಶೆಂಟ್‌ ನಂಬರ್‌ 4186 ವ್ಯಕ್ತಿಗೆ ಕೋವಿಡ್‌ -19 ಪೊಸೆಟಿವ್‌ ದೃಢಪಟ್ಟ ಹಿನ್ನಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಕಂಟೈನ್ಮೆಂಟ್‌ ಝೋನ್‌ ಪರಿಸರದಲ್ಲಿ ಬಫರ್‌ ಝೋನ್‌ ಘೋಷಣೆ ಮಾಡಲಾಗಿದೆ.
ಮೂಡುಬಿದಿರೆ ತಾಲೂಕಿನ ನೆಲ್ಲಿಕ್ಕಾರು ಗ್ರಾಮದ ಹಮರು ರಸ್ತೆಯ ಪರಿಸರದಲ್ಲಿದ್ದ ಪೇಶೆಂಟ್‌ ನಂಬರ್‌ 4187ವ್ಯಕ್ತಿಯಲ್ಲಿ ಕೋವಿಡ್‌ 19 ಪೊಸೆಟಿವ್‌ ದೃಢಪಟ್ಟಿದ್ದು ಈ ಪ್ರದೇಶವನ್ನು ಆಕ್ಟಿವ್‌ ಕಂಟೈನ್‌ ಮೆಂಟ್‌ ಝೋನ್‌ ಎಂದು ಪರಿಗಣಿಸಿ ಆದೇಶಿಸಲಾಗಿದೆ. ಇದರ ಪರಿಸರದಲ್ಲಿ ಬಫರ್‌ ಝೋನ್‌ ಘೋಷಣೆ ಮಾಡಲಾಗಿದೆ.

LEAVE A REPLY

Please enter your comment!
Please enter your name here