ಬೆಂಗಳೂರು ಫಸ್ಟ್&ಫಾಸ್ಟ್ ಸಿಟಿಯಾಗಲಿದೆ

0
281

 
ಬೆಂಗಳೂರು ಪ್ರತಿನಿಧಿ ವರದಿ
ಬೆಂಗಳೂರನ್ನು ಸೇಫ್ ಸಿಟಿ ಮಾಡುವ ದೂರದೃಷ್ಟಿ ಇದೆ. ಫಸ್ಟ್ & ಫಾಸ್ಟ್ ಎಂಬ ಉದ್ದೇಶದಿಂದ ಜತೆ ಆರಂಭಿಸಿದ್ದೇವೆ ಎಂದು ಬೆಂಗಳೂರಿನಲ್ಲಿ ಗೃಹಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.
 
 
ನಗರದಲ್ಲಿ ಅಪರಾಧ, ಅಪಘಾತಗಳು ಹೆಚ್ಚಾಗುತ್ತಿದೆ. ಇದಕ್ಕಾಗಿ ಪೊಲೀಸ್ ಇಲಾಖೆಗೆ ಹೆಚ್ಚೆಚ್ಚು ವಾಹನಗಳು ಹಾಕಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತೆ 500 ಹೊಸ ವಾಹನ ಸೇರ್ಪಡೆಯಾಗಲಿದೆ.
 
ಪೊಲೀಸರಿಗಾಗಿ 1 ಸಾವಿರ ಬೈಕ್ ನೀಡುವ ಚಿಂತನೆ ಇದೆ.ಸಿಟಿ ಹೊರವಲಯದಲ್ಲೂ ಸಹ ಗಸ್ತು ತಿರುಗಲು ಯೋಜನೆ ಇದೆ. ಪ್ರದೇಶ ಪುನಾರಚನೆ ಮಾಡಿ ನಂತರ ಗಸ್ತು ಸಂಬಂಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
 
 
 
ಸದ್ಯದಲ್ಲೇ ಪೊಲೀಸ್ ಇಲಾಖೆಗೆ 8 ಸಾವಿರ ಸಿಬ್ಬಂದಿ ನೇಮಕ ಮಾಡಲಾಗುತ್ತದೆ. ಬೆಂಗಳೂರು ನಗರಕ್ಕೆ 2600 ಸಿಬ್ಬಂದಿ ನೇಮಕ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಬೇರೆ ಆಯುಕ್ತರಿಗೂ ಹೊಯ್ಸಳ ಸೇವೆ ನೀಡುತ್ತೇವೆ.
 
 
ಇನ್ಮುಂದೆ ಬೆಂಗಳೂರಿನಲ್ಲಿ ತಡರಾತ್ರಿಯವರೆಗೆ ರೆಸ್ಟೋರೆಂಟ್ ಕಾರ್ಯ ನಿರ್ವಹಿಸಲಿದೆ. ಐಟಿ ಜನರ ಅನುಕೂಲಕ್ಕಾಗಿ ರಾತ್ರಿ 1 ಗಂಟೆಯವರೆಗೆ ರೆಸ್ಟೋರೆಂಟ್ ತೆರೆಯಲು ಅವಕಾಶ ನೀಡಲಾಗಿದ್ದು, ಪರವಾನಗಿ ನೀಡಿದ್ದೇವೆ.

LEAVE A REPLY

Please enter your comment!
Please enter your name here