ಬೆಂಗಳೂರಿನ ಘಟನೆ ಬಹಳ ಕಾಡುತ್ತಿದೆ: ಕೊಹ್ಲಿ

0
244

ನಮ್ಮ ಪ್ರತಿನಿಧಿ ವರದಿ
ಬೆಂಗಳೂರಿನಲ್ಲಿ ನಡೆದ ಕಾಮುಕರ ಅಟ್ಟಹಾಸವನ್ನು ಟೀಂ ಇಂಡಿಯಾದ ಟೆಸ್ಟ್ ಕ್ಯಾಪ್ಟನ್ ವಿರಾಟ್ ಕೊಹ್ಲಿ ಖಂಡಿಸಿದ್ದಾರೆ. ಬೆಂಗಳೂರಿನ ಘಟನೆಯಿಂದ ಬಹಳ ನೋವಾಗಿದೆ. ಇಂತಹ ಘಟನೆಗಳು ಸಮಾಜ ತಲೆತಗ್ಗಿಸುವಂತೆ ಮಾಡುತ್ತದೆ. ಸಂತ್ರಸ್ತೆ ನಿಮ್ಮ ಕುಟುಂಬದವರಾಗಿದ್ದರೆ ಹೇಗಿರುತ್ತದೆ? ಎಂದು ವಿರಾಟ್ ಪ್ರಶ್ನಿಸಿದ್ದಾರೆ.
 
 
ಹೆಣ್ಣನ್ನು ಗೌರವಿಸುವ ಬಗ್ಗೆ ಸಮಾಜ ಪಾಠ ಕಲಿಯಬೇಕು. ಇಂಥಾ ಸಮಾದಲ್ಲಿದ್ದೇನೆ ಎಂಬುದು ತಲೆತಗ್ಗಿಸುವಂತೆ ಮಾಡಿದೆ. ಸ್ಥಳದಲ್ಲಿದ್ದರೂ ಕೆಲವರು ಸುಮ್ಮನಿದ್ದರು, ಇದು ನಿಜಕ್ಕೂ ಹೇಡಿತನ. ಘಟನೆ ನೋಡಿಯೂ ಸುಮ್ಮನಿದ್ದವರು ಗಂಡಸರಾಗುವುದಿಲ್ಲ. ತುಂಡುಡುಗೆ ತೊಟ್ಟವರನ್ನು ನೋಡುವ ರೀತಿ ಬದಲಾಗಲಿ. ಬಟ್ಟೆ ಸಮಸ್ಯೆಯಲ್ಲ, ಸಮಸ್ಯೆ ನಮ್ಮ ಆಲೋಚನೆಯದ್ದು ಎಂದು ಕೊಹ್ಲಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here