ಬೆಂಕಿ ರೂಪದಲ್ಲಿ ಬಂದ ಯಮರಾಯ

0
387

ಬೆಂಗಳೂರು ಪ್ರತಿನಿಧಿ ವರದಿ
updated news:
ಪತಿಗಾಗಿ ಹಂಬಲ:
‘ಎಲ್ಲಿದ್ದರೂ ಬನ್ನಿ…ಕೊನೆಯ ಬಾರಿ ನೋಡಿ, ಮಾತಾಡಿಸಿ’ ಎಂದು ಪತಿ ಸುರೇಶ್ ಗಾಗಿ ಗಾಯಾಳು ಮಮತಾ ಕನವರಿಸುತ್ತಿದ್ದಾರೆ. ತನ್ನ ಪತಿ ನೋಡುವಿಕೆಗಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಮಮತಾ ಕರೆ ನೀಡಿದ್ದಾರೆ.
ಕೆಎಸ್ ಆರ್ ಟಿಸಿ ಬಸ್ ನಲ್ಲಿ ಭೀಕರ ಅಗ್ನಿ ದುರಂತ ಪ್ರಕರಣದಲ್ಲಿ ಮಮತಾ ಶೇ.70ರಷ್ಟು ಸುಟ್ಟಗಾಯಗಳಿಂದಾಗಿ ಗಂಭೀರ ಸ್ಥಿತಿಯಲ್ಲಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗಾಯಾಳು ಮಮತಾಗೆ ಚಿಕಿತ್ಸೆ ನೀಡಲಾಗುತ್ತಿದೆ.
‘ನನ್ನ ತಂಗಿ ಮಮತಾ ಪತಿಯನ್ನು ನೋಡಲು ಬಯಸಿದ್ದಾಳೆ.’ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಳೆ, ವೈದ್ಯರು ಗ್ಯಾರಂಟಿ ಕೊಟ್ಟಿಲ್ಲ’. ಸುರೇಶ್ ಎಲ್ಲಿದ್ದರೂ ದಯಮಾಡಿ ಬನ್ನಿ, ತಂಗಿಯನ್ನು ನೋಡಿ’ ಆಕೆ ನಿಮ್ಮನ್ನು ಭೇಟಿಯಾಗಲು ಬಯಸಿದ್ದಾಳೆ ಪ್ಲೀಸ್ ಬನ್ನಿ’ ಎಂದು ಗಾಯಾಳು ಮಮತಾ ಅವರ ಸಹೋದರ ತನ್ನ ಬಾವ ಸುರೇಶ್ ಗೆ ಮನವಿ ಮಾಡಿದ್ದಾರೆ.
ಮಮತಾ ಮತ್ತು ಪತಿ ಸುರೇಶ್ ಕೆಂಗೇರಿಯಲ್ಲಿ ವಾಸವಿದ್ದರು. ಆರು ತಿಂಗಳ ಹಿಂದೆ ಸುರೇಶ್ ಮಮತಾರಿಂದ ದೂರವಾಗಿದ್ದರು.
 
 
 
ಬಸ್ ನ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿಲ್ಲ!
ಕೆಎಸ್ ಆರ್ ಟಿಸಿ ಬಸ್ ನಲ್ಲಿ ಭೀಕರ ಅಗ್ನಿ ದುರಂತ ಪ್ರಕರಣ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಕೆಎಸ್ ಆರ್ ಟಿಸಿ ಬಸ್ ನ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿಲ್ಲ ಎಂದು ಮಾಧ್ಯಮಕ್ಕೆ ಕೆಎಸ್ ಆರ್ ಟಿಸಿ ಎಂಡಿ ರಾಜೇಂದರ್ ಕುಮಾರ್ ಕಟಾರಿಯಾ ತಿಳಿಸಿದ್ದಾರೆ. ಹಳೆಯ ಬಸ್ ಹಿನ್ನೆಲೆಯಲ್ಲಿ ಎಲೆಕ್ಟ್ರಿಕಲ್ ಟ್ರಾನ್ಸ್ಮಿಷನ್ ಇಲ್ಲ. ಟೈಯರ್ ಗಳು ಚೆನ್ನಾಗಿದ್ದು, ಟೈಯರ್ ಸ್ಫೋಟಗೊಂಡಿಲ್ಲ. ಬೆಂಕಿ ಅಪಘಾಡಕ್ಕೆ ಏನು ಕಾರಣವೆಂಬ ಬಗ್ಗೆ ಪರಿಶೀಲನೆ ನಡೆಸಬೇಕು. ಫಾರೆನ್ಸಿಕ್ ತಂಡಕ್ಕೆ ಮನವಿ ಮಾಡಿದ್ದು, ಭೇಟಿ ನೀಡಲಿದೆ.ಈಗಾಗಲೇ ಇಂಜಿನಿಯರ್ ತಂಡ ಸ್ಥಳಕ್ಕೆ ಭೇಟಿ ನೀಡಿದೆ.
ಚಲಿಸುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ ಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಮಹಿಳೆ ಪ್ರಯಾಣಿಕರೊಬ್ಬರು ಸಜೀವ ದಹನವಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಬಳಿಯ ಅರಿಶೀನಕುಂಟೆ ಟೋಲ್ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಭವಿಸಿದೆ.
 
 
ಸರ್ಕಾರಿ ಬಸ್ ನಲ್ಲಿ ಕಾಣಿಸಿಕೊಂಡ ಯಮ:
ದಾಸರಹಳ್ಳಿ ಮೂಲದ ಭಾಗ್ಯಮ್ಮ ಮೃತ ದುರ್ದೈವಿಯಾಗಿದ್ದಾರೆ. ಬೆಂಕಿಗಾಹುತಿಯಾದ KA 18F-640 ನಂಬರ್​​​ನ KSRTC ಬಸ್ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಬರುತ್ತಿತ್ತು. ರಾತ್ರಿ 12 ಗಂಟೆ ಸುಮಾರಿಗೆ ​​ಅರೀಶಿನಕುಂಟೆ ಬಳಿ ಬರುತ್ತಿದ್ದಾಗ ಇಂಜಿನ್​​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಕೂಡಲೇ ಚಾಲಕ ಬಸ್’ನ್ನು ನಿಲ್ಲಿಸಿದನಾದರೂ, ಎಲ್ಲಾ ಪ್ರಾಯಾಣಿಕರು ಬಸ್ ನಿಂದ ಇಳಿಯಲು ಸಾಧ್ಯವಾಗಲಿಲ್ಲ. ಪರಿಣಾಮ ಬಸ್​’ನಲ್ಲಿ ಪ್ರಯಾಣ ಮಾಡುತ್ತಿದ್ದ 50 ಜನರ ಪೈಕಿ ಭಾಗ್ಯಮ್ಮ ಎಂಬಾ ವೃದ್ಧೆ ಬಸ್’​​ನಲ್ಲಿ ಸಜೀವ ದಹನವಾಗಿದ್ದು, 9 ಮಂದಿಗೆ ಗಂಭೀರ ಸುಟ್ಟ ಗಾಯಗಳಾಗಿವೆ.
 
ಗಂಭೀರ ಗಾಯಗೊಂಡಿರುವ ಗಾಯಳುಗಳಿಗೆ ನೆಲಮಂಗಲದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನೆಲಮಂಗಲ ಗ್ರಾಮಂತರ ಪೊಲೀಸ್​​ ಠಾಣೆಯಲ್ಲಿ ​ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
ಪ್ರಕರಣದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಕೆಎಸ್ ಆರ್ ಟಿಸಿ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಕೆಎಸ್ ಆರ್ ಟಿಸಿ ಅಧಿಕಾರಿ ಜಿ.ಎನ್.ಲಿಂಗರಾಜು ಭೇಟಿ ನೀಡಿ, ಬಸ್ ಚಾಲಕ, ನಿರ್ವಾಹಕನಿಂದ ಮಾಹಿತಿ ಪಡೆದಿದ್ದಾರೆ. ಪೊಲೀಸ್ ಜತೆಯೂ ಅಧಿಕಾರಿಗಳು ಮಾಹಿತಿ ಕಲೆಹಾಕಿದ್ದಾರೆ.

LEAVE A REPLY

Please enter your comment!
Please enter your name here