ಬೆಂಕಿ ಅವಘಡ: ತಪ್ಪಿದ ಅನಾಹುತ

0
617

ಬೆಂಗಳೂರು ಪ್ರತಿನಿಧಿ ವರದಿ
ಬಿಎಂಟಿಸಿ ಬಸ್ ಹೊತ್ತಿ ಉರಿದ ಘಟನೆ ಬೆಂಗಳೂರು-ಮೈಸೂರು ಹೆದ್ದಾರಿಯ ರಾಮನಗರ ಜಿಲ್ಲೆ ಚನ್ನಪಟ್ಟಣದ ಕಾಮತ್ ಹೋಟೆಲ್ ಬಳಿ ಸಂಭವಿಸಿದೆ. ನಡುರಸ್ತೆಯಲ್ಲೇ ಸರ್ಕಾರಿ ಬಸ್ ಹೊತ್ತಿ ಉರಿದಿದೆ.
 
 
 
ಬಸ್ ನಲ್ಲಿ 40 ಮಂದಿ ಶಾಲಾ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು. ಬೆಂಕಿ ಕಂಡು ತಕ್ಷಣ ವಿದ್ಯಾರ್ಥಿಗಳು ಕೆಳಗಿಳಿದಿದ್ದಾರೆ. 6 ಬಸ್ ಗಳಲ್ಲಿ ವಿದ್ಯಾರ್ಥಿಗಳು ತಲಕಾಡಿಗೆ ಪ್ರವಾಸಕ್ಕೆಂದು ತೆರಳಿದ್ದರು.
 
 
 
ಶಾಲಾ ಪ್ರವಾಸಕ್ಕೆ ಅನುಮತಿ ಮೇರೆಗೆ ಬಿಎಂಟಿಸಿ ಬಸ್ ಪಡೆದಿದ್ದರು. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿದೆ ಎನ್ನಲಾಗಿದೆ. ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

LEAVE A REPLY

Please enter your comment!
Please enter your name here