ಬೃಹತ್ ಮಾರಾಟ

0
931

 
.ವರದಿ/ಚಿತ್ರ: ಸತೀಶ್ ಕಾಪಿಕಾಡ್
ರಾಜಸ್ಥಾನ ಅರ್ಟ್ ಎಂಡ್ ಕ್ರಾಫ್ಟ್ಸ್ ಇವರ ಸಂಯೋಜನೆಯಲ್ಲಿ ವಿವಿಧ ಕರಕುಶಲ ವಸ್ತುಗಳ ಹಾಗೂ ಸಿಲ್ಕ್ ಮತ್ತು ಕೈಮಗ್ಗ ಸೀರೆಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ “ಕಾಟನ್, ಸಿಲ್ಕ್ ಎಂಡ್ ಕ್ರಾಫ್ಟ್ಸ್ ಎಕ್ಸ್ಪೋ – 2016” ತಾ| 06.05.2016ರಿಂದ ನಗರದ ಬಂಟ್ಸ್ ಹಾಸ್ಟೇಲ್ ರಸ್ತೆಯ ಹೋಟೇಲ್ ವುಡ್‌ಲ್ಯಾಂಡ್ಸ್‌ನಲ್ಲಿ ನಲ್ಲಿ ಆರಂಭಗೊಂಡಿದ್ದು, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ಇಂದು ಬೆಳಿಗ್ಗೆ ಮೇಳವನ್ನು ಉದ್ಘಾಟಿಸಿ, ಶುಭಾಕೋರಿದರು.
 
mnglr woodland
 
ನಮ್ಮ ದೇಶದ ವಿವಿಧ ರಾಜ್ಯಗಳ ಕುಶಲಕರ್ಮಿಗಳು ತಾವೇ ಸ್ವತಹ ತಯಾರಿಸಿದಂತಹ ವಸ್ತ್ರಭರಣ, ಕೈಮಗ, ಕಾಟನ್ ಮತ್ತು ಸಿಲ್ಕ್ ಸಾರಿಗಳು, ಗೃಹಪೋಪಕರಣಗಳು ಸೇರಿದಂತೆ ಇನ್ನೂ ಹಲವಾರು ವ್ಯೆರಟಿಯ ವಿಶೇಷ ವಿನ್ಯಾಸಗಳ ವಿವಿಧ್ಯಮಯ ಉತ್ಪನ್ನಗಳು ಇಲ್ಲಿ ಲಭ್ಯವಿದ್ದು, ಜಿಲ್ಲೆಯ ಜನರು ಈ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ “ಕಾಟನ್, ಸಿಲ್ಕ್ ಎಂಡ್ ಕ್ರಾಫ್ಟ್ಸ್ ಎಕ್ಸ್ಪೋ – 2016” ನ್ನು ಪ್ರೋತ್ಸಾಹಿಸಬೇಕು ಎಂದು ಐವನ್ ಡಿಸೋಜ ಹೇಳಿದರು.
 
 
“ಕಾಟನ್, ಸಿಲ್ಕ್ ಎಂಡ್ ಕ್ರಾಫ್ಟ್ಸ್ ಎಕ್ಸ್ಪೋ – 2016” ರ ಸಂಯೋಜಕರಾದ ಮಹಾವೀರ್ ರಾಜಸ್ಥಾನ, ದಿನೇಶ ಶರ್ಮಾ ಜೈಪುರ್, ಹಾಗೂ ಪ್ರಮುಖರಾದ ಮೊಹಮ್ಮದ್ ದಿಲವರ್ ರಾಜಸ್ಥಾನ, ಅಲಿಮ್ ಅನ್ಸುರಿ ರಾಜಸ್ಥಾನ ಉಪಸ್ಥಿತರಿದ್ದರು.
 
 
 
ಮೇಳದಲ್ಲಿ ರಾಜಸ್ಥಾನ ಮಾತ್ರವಲ್ಲದೇ ದೇಶದ ವಿವಿಧ ರಾಜ್ಯಗಳ ಕರಕುಶಲ ವಸ್ತುಗಳು ಮತ್ತು ಸಿಲ್ಕ್ ಸಾರಿಗಳು ಹಾಗೂ ಕೈಮಗ್ಗ ಸೀರೆಗಳ ಬೃಹತ್ ಪ್ರದರ್ಶನವನ್ನು ಇಲ್ಲಿ ಹಮ್ಮಿಕೊಳ್ಳಲಾಗಿದ್ದು, ಮಂಗಳೂರಿನ ಜನತೆಗೆ ಬೇರೆ ಬೇರೆ ರಾಜ್ಯಗಳ ಕೈಮಗ್ಗ ಸೀರೆಗಳ ಹಾಗೂ ಕರಕುಶಲ ವಸ್ತುಗಳ ಅಯ್ಕೆಗೆ ವಿಫುಲ ಅವಕಾಶವನ್ನು ಕಲ್ಪಿಸಲಾಗಿದೆ.
 
 
 
ರಾಜಸ್ಥಾನ ಮಾತ್ರವಲ್ಲದೇ ಉತ್ತರಪ್ರದೇಶ, ಮಧ್ಯಪ್ರದೇಶ, ಅಂದ್ರಪ್ರದೇಶ, ತಮಿಳುನಾಡು, ಗುಜರಾತ್, ಬಿಹಾರ, ಓರಿಸ್ಸಾ, ಪಶ್ಚಿಮ ಬಂಗಾಳ, ಜಮ್ಮು ಎಂಡ್ ಕಾಶ್ಮೀರ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಪೇಯಿಂಟಿಂಗ್ಸ್, ಇಮಿಟೇಶನ ಜ್ಯುವೆಲರಿ, ಹ್ಯಾಂಡ್ ಕ್ರಾಪ್ಟ್ , ಹ್ಯಾಂಡ್ಲೂಮ್ಸ್, ಲಕೌನ್ ಚಿಕನ್ಕಾರಿ ಪ್ಯಾಭ್ರಿಕ್ಸ್, ರಾಜಸ್ಥಾನಿ ಬ್ಲಾಕ್ ಪ್ರಿಟೆಂಡ್ ಪ್ಯಾಭ್ರಿಕ್ಸ್, ಕಾಂತ ಎಂಬ್ರಾಯಿಡರ್ ಪ್ಯಾಭ್ರಿಕ್ಸ್, ಚಿಕನ್ ಎಂಬ್ರಾಯಿಡರ್ ಪ್ಯಾಭ್ರಿಕ್ಸ್, ಬನಾರಸಿ ಕಾಟನ್ ಪ್ಯಾಭ್ರಿಕ್ಸ್, ಅಪ್ಲಿಕ್ಯೂ ವರ್ಕ್ ಪ್ಯಾಭ್ರಿಕ್ಸ್, ಕಾಶ್ಮೀರಿ ಪ್ರಿಟಿಂಗ್ ಪ್ಯಾಭ್ರಿಕ್ಸ್, ಬಾಗಾ ಪ್ರಿಂಟ್ ಪ್ಯಾಭ್ರಿಕ್ಸ್, ಚಂದರಿ ಪ್ಯಾಭ್ರಿಕ್ಸ್, ಕೊಟ ಪ್ಯಾಭ್ರಿಕ್ಸ್, ಸಾರಿಸ್, ದುಪಟ್ಟ, ಕುರ್ತಾ, ಟಾಪ್ಸ್, ಸಲ್ವಾರ್, ಕಮಿಜ್, ಕರ್ಟನ್ಸ್, ಬೆಡ್ಶಿಟ್, ದರಿ(ಸತ್ರಂಗಿ) ಹಾಗೂ ಸೀರೆಗಳು, ಡ್ರೆಸ್ ಮೆಟಿರಿಯಲ್ಸ್, ಕುರ್ತಾಸ್, ಸಲ್ವಾರ್ ಕಮೀಜ್, ಗೃಹೋಪಕರಣ ವಸ್ತುಗಳು ಸೇರಿದಂತೆ ಇನ್ನೂ ಅನೇಕ ವಿಧದ ವೈವಿದ್ಯಮಯ ಕೈಮಗ್ಗದ ಸೀರೆಗಳು ಇಲ್ಲಿ ಲಭ್ಯವಿರುವುದು.
 
 
 
ರಾಜಸ್ಥಾನ ಸಿಲ್ಕ್ ಸಾರಿ, ಮೈಸೂರ್ ಸಿಲ್ಕ್ ಸಾರಿ, ಓರಿಸ್ಸಾ ಸಿಲ್ಕ್ ಸೀರೆಗಳು, ಕಾಂತ ವರ್ಕ್ ಸಿಲ್ಕ್ ಸೀರೆಗಳು, ಕೋಸಿಯಾ ಕೈ ಮಗ್ಗದ ಸೀರೆಗಳು, ಬಾಗಲ್ಪುರ್ ಸಿಲ್ಕ್ ಸೀರೆಗಳು, ಬನರಸ್ ಸಿಲ್ಕ್ ಸಾರಿ, ವೆಜ್ ಡೈ ಬ್ಲಾಕ್ ಪ್ರಿಂಟೆಡ್ ಸೀರೆಗಳು, ಮಧುರೈ ಸುಗುಡಿ ಕಾಟನ್ ಸೀರೆಗಳು, ಸಾಂಬ್ಲಪುರಿ ಇಕ್ತಾ ಸೀರೆಗಳು, ಕೈಮಗ್ಗದ ಕಾಟನ್ ಸೀರೆಗಳು, ಚಾಂದಾರ್ ಕಾಟನ್ ಸೀರೆಗಳು, ಪೌಂಚಪಲ್ಲಿ ಕೈಮಗ್ಗದ ಸೀರೆಗಳು, ಫೋಲ್ಕರಿ ವಿನ್ಯಾಸದ ಪಾಟಿಯಾಲ, ಫೋಲ್ಕರಿ ಬೆಡ್ಶೀಟ್, ಹಾಗೂ ಸೋಫಾ ಸೆಟ್ ಕವರ್, ಸಿಲ್ಕ್ ಕುಶನ್ ಕವರ್, ರಾಜಸ್ಥಾನ್ ಬೆಡ್ಶೀಟ್ ಗಳು ಹಾಗೂ ಇನ್ನಿತರ ಕೈಮಗ್ಗದ ಸೀರೆಗಳು ಇಲ್ಲಿ ಲಭ್ಯವಿರುವುದು.
 
 
 
ಮಾತ್ರವಲ್ಲದೇ ವಿಶೇಷ ಶೈಲಿಯ ಜೈಪುರ್ ಆಭರಣಗಳು, ವಿಶೇಷ ವಿನ್ಯಾಸದ ವೈವಿಧ್ಯಮಯ ಮಣ್ಣಿನ ವಿಗ್ರಹಗಳು ಬೃಹತ್ ಸಂಗ್ರಹ ಇಲ್ಲಿವೆ ಎಂದು ಮೇಳದ ಸಂಘಟಕರಾದ ಮಾಹವೀರ್ ಹಾಗೂ ದಿನೇಶ್ ಶರ್ಮಾ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here