ಬೂಂದಿ ರಾಯತ

0
548

ವಾರ್ತೆ ರೆಸಿಪಿ
ಬೇಕಾಗುವ ಸಾಮಗ್ರಿಗಳು:
ಗಟ್ಟಿಮೊಸರು ಎರಡು ಲೋಟ, ಅರ್ಧ ಲೋಟ ಹಾಲು, ಬೂಂದಿ ಒಂದು ಲೋಟ, ಉಪ್ಪು ರುಚಿಗೆ, ಒಗ್ಗರಣೆಗೆ ಸಾಸಿವೆ, ಜೀರಿಗೆ, ತುಪ್ಪ,ಚಿಟಿಕೆ ಇಂಗು, ಎರಡು ಒಣ ಮೆಣಸಿನಕಾಯಿ, ನಾಲ್ಕಾರು ಕರಿಬೇವು ಎಲೆ ಕೊತ್ತಂಬರಿ ಸೊಪ್ಪು ಅರ್ಧ ಕಟ್ಟು.
 
ತಯಾರಿಸುವ ವಿಧಾನ:
ಮೊಸರು ಕಡೆದು ಹಾಲು ಬೆರೆಸಿ ಚೆನ್ನಾಗಿ ಕಡೆಯಿರಿ, ಉಪ್ಪು ಹಾಕಿ ಬೂಂದಿಯನ್ನು ನೀರಿನಲ್ಲಿ ಐದು ನಿಮಿಷ ನೆನೆಸಿ ಹಿಂಡಿ(ಮೃದುವಾಗಿ) ನೀರು ತೆಗೆದು,ಮೊಸರು ಬೆರೆಸಿ ಒಗ್ಗರಣೆ ಹಾಕಿ ಮಿಶ್ರಣಕ್ಕೆ ಬೆರೆಸಿ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿ ಅದಕ್ಕೆ ಸೇರಿಸಿ ಮೆಣಸಿನ ಪುಡಿ ಅಥವಾ ಸಾರಿನ ಪುಡಿ ಚಿಟಿಕೆ ಬೆರೆಸಿದರೆ ರುಚಿ ಹೆಚ್ಚು

LEAVE A REPLY

Please enter your comment!
Please enter your name here