ಬುಲೆಟ್ ಸಂಚಾರಕ್ಕಾಗಿ ಸಮುದ್ರದೊಳಗಿನ ಸುರಂಗ ಮಾರ್ಗ

0
176

ವಿಶೇಷ ಲೇಖನ
ಈಗಾಗಲೇ ಘೋಷಣೆಯಾಗಿರುವ ಮುಂಬೈ- ಅಹಮದಾಬಾದ್‌ ನಡುವಿನ ದೇಶದ ಮೊದಲ ಬುಲೆಟ್‌ ಟ್ರೈನ್‌ ಯೋಜನೆಯ ಅನ್ವಯ ಪುಣೆಯಿಂದ ಏಳು ಕಿಮೀ ದೂರದ ವರೆಗೆ ಸಮುದ್ರದಾಳದಲ್ಲಿ ರೈಲು ಮಾರ್ಗದ ಕಾಮಗಾರಿ ಆರಂಭವಾಗಲಿದೆ. ಸಮುದ್ರದಾಳದಲ್ಲಿ ಸುರಂಗ ನಿರ್ಮಿಸುವ ನಿಮಿತ್ತ ಮಣ್ಣು ಮತ್ತು ಕಲ್ಲಿನ ಪರೀಕ್ಷೆ ನಡೆಸಲಾಗುತ್ತಿದೆ.
 
 
ಕಾಮಗಾರಿ ಪೂರ್ತಿಯಾದ ಬಳಿಕ ಇದು ದೇಶದ ಮೊದಲ ಸಮುದ್ರದಾಳದ ರೈಲು ಮಾರ್ಗ ಎಂಬ ಹೆಗ್ಗಳಿಕೆಯೂ ಪಾತ್ರವಾಗಲಿದೆ. ಇದರ ಮಾರ್ಗ 508 ಕಿ.ಮೀ ಉದ್ದವಿದ್ದು, ಠಾಣೆ ಮತ್ತು ವಿರಾರ್ ನಡುವೆ 21 ಕಿ.ಮೀ ಉದ್ದದ ಸುರಂಗವಿರಲಿದೆ. ಇದರಲ್ಲಿ 7 ಕಿ.ಮೀನಷ್ಟು ಸುರಂಗ ಸಮುದ್ರದಾಳದಲ್ಲಿರುತ್ತದೆ. ಬುಲೆಟ್ ರೈಲಿನ ಸುರಂಗ ಮಾರ್ಗ ಸಮುದ್ರದ ತಳಭಾಗದಿಂದ 70 ಅಡಿ ಕೆಳಗೆ ಸಾಗಲಿದೆ.
 
 
ಸಮುದ್ರದೊಳಗೆ ಸುರಂಗ ಮಾರ್ಗ ನಿರ್ಮಿಸುವ ಹಿನ್ನೆಲೆಯಲ್ಲಿ ಅಲ್ಲಿನ ಮಣ್ಣು ಮತ್ತು ಕಲ್ಲಿನ ರಚನೆ ಸುರಂಗ ನಿರ್ಮಾಣಕ್ಕೆ ಯೀಗ್ಯವಾಗಿದೆಯೇ ಎಂಬುದನ್ನು ಪತ್ತೆ ಹಚ್ಚಲು ಮಣ್ಣು ಮತ್ತು ಕಲ್ಲಿನ ಪರೀಕ್ಷೆ ನಡೆಸಲಾಗುತ್ತದೆ ಎಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
 
 
ಜಪಾನ್‌ ಅಂತಾರಾಷ್ಟ್ರೀಯ ಸಹಕಾರ ಸಂಸ್ಥೆ (ಜೈಕಾ)ಕಾರ್ಯಸಾಧ್ಯ ಅಧ್ಯಯನ ನಡೆಸಿದ್ದು, ಈ ಯೋಜನೆಯ ಕಾಮಗಾರಿಯನ್ನು ನಡೆಸುತ್ತಿದೆ. ಯೋಜನೆಗೆ ಒಟ್ಟು 97, 636 ಕೋಟಿ ರೂ. ವೆಚ್ಚವಾಗಲಿದೆ. ಜಪಾನ್ ನ ಜೈಕಾವೇ ಅದಕ್ಕೆ ಶೇ.81ರಷ್ಟು ಪ್ರಮಾಣದಲ್ಲಿ ಸಾಲ ರೂಪದಲ್ಲಿ ನೆರವು ನೀಡಲಿದ್ದು, ನೆರವು ಮಾತ್ರ ಹಣದ ರೂಪದಲ್ಲಿ ಇರದೆ ಯೋಜನೆಗೆ ಅಗತ್ಯವಿರುವ ಪರಿಕರಗಳು, ಸಾಮಾಗ್ರಿಗಳ ರೂಪದಲ್ಲಿ ಇರಲಿದೆ. ಸದ್ಯ ಯೋಜನೆ ಸಮೀಕ್ಷೆಯ ಹಂತದಲ್ಲಿದೆ. 2018ರಲ್ಲಿ ಕಾಮಗಾರಿ ಆರಂಭವಾಗಿ 2023ಕ್ಕೆ ಮುಕ್ತಾಯವಾಗಲಿದೆ. ಕಾಮಗಾರಿ ಮುಗಿದ ಬಳಿಕ ಪ್ರಯಾಣ 2 ಗಂಟೆಗೆ ಇಳಿಯಲಿದೆ.

LEAVE A REPLY

Please enter your comment!
Please enter your name here