ಬುಲೆಟ್‌ ಪ್ರೂಫ್ ಆವರಣದೊಳಗೆ ಪ್ರಧಾನಿ ಭಾಷಣ

0
141

 
ವರದಿ: ಲೇಖಾ
ಉಗ್ರರ ಬೆದರಿಕೆ, ದಾಳಿಯ ಸಂಭಾವ್ಯತೆ ಇರುವುದರಿಂದ ಈ ಬಾರಿ ಆಗಸ್ಟ್‌ 15ರ ಸ್ವಾತಂತ್ರ್ಯ ದಿನದಂದು ದಿಲ್ಲಿಯ ಕೆಂಪು ಕೋಟೆಯಿಂದ “ಬುಲೆಟ್‌ ಪ್ರೂಫ್ ಆವರಣ’ದೊಳಗೆ ನಿಂತುಕೊಂಡು ಭಾಷಣ ಮಾಡುವಂತೆ ಗುಪ್ತಚರ ದಳ ಪ್ರಧಾನಿ ಮೋದಿಯನ್ನು ಕೇಳಿಕೊಂಡಿದೆ.
 
 
 
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಾಲ್‌ ಅವರೊಂದಿಗೆ ಭದ್ರತಾ ಸಂಸ್ಥೆಗಳು ಉನ್ನತ ಮಟ್ಟದ ಮಾತುಕತೆ ನಡೆಸಿದ್ದು ಪ್ರಧಾನಿ ಮೋದಿಗೆ ಈ ಸಲಹೆಯನ್ನು ಕೊಡಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
 
 
 
ಬುಲೆಟ್‌ ಪ್ರೂಫ್ ಆವರಣದೊಳಗೆ ನಿಂತುಕೊಂಡು ಸ್ವಾತಂತ್ರ್ಯ ದಿನದ ಭಾಷಣ ಮಾಡುವಂತೆ ಗುಪ್ತಚರ ದಳ ಮತ್ತು ಪ್ರಧಾನಿಯವರ ವಿಶೇಷ ರಕ್ಷಣಾ ಸಮೂಹ ಪ್ರಧಾನಿಗೆ ಸಲಹೆ ನೀಡಿದೆ.
 
 
ವರದಿಗಳ ಪ್ರಕಾರ ಪ್ರಧಾನಿ ಮೋದಿಗೆ ಅತ್ಯಂತ ಗರಿಷ್ಠ ಪ್ರಾಣ ಬೆದರಿಕೆ ಇದೆ. ಈ ಸಲಹೆಯನ್ನು ಈ ಬಾರಿ ತಿರಸ್ಕರಿಸುವುದಿಲ್ಲ ಎಂದು ತಿಳಿಯಲಾಗಿದೆ. ಕಳೆದೆರಡು ವರ್ಷಗಳಲ್ಲಿ ಪ್ರಧಾನಿ ಮೋದಿ ಅವರು ಬುಲೆಟ್‌ ಪ್ರೂಫ್ ಬಳಸದೆಯೇ ಸ್ವಾತಂತ್ರ್ಯ ದಿನದ ಭಾಷಣ ಮಾಡಿದ್ದರು.
 
 
 
ಕಾಶ್ಮೀರದಲ್ಲಿನ ಅಶಾಂತಿ, ಉದ್ರಿಕ್ತತೆ, ಉಗ್ರರ ಒಳನುಸುಳುವಿಕೆ ಮಾತ್ರವೇ ಪ್ರಧಾನಿಗಿರುವ ಬೆದರಿಕೆಯಾಗಿಲ್ಲ. ಬೇರೆ ಬೇರೆ ಬಗೆಯ ಆಂತರಿಕ ಬೆದರಿಕೆಗಳೂ ಪ್ರಧಾನಿಗೆ ಇವೆ ಎನ್ನಲಾಗಿದೆ.
ಪ್ರಧಾನಿಯವರು ಕೆಂಪು ಕೋಟೆಯ ಮೇಲಿಂದ ಭಾಷಣ ಮಾಡುವಾಗಲೇ ಅವರ ಮೇಲೆ ಉಗ್ರರು ಡ್ರೋನ್‌ ದಾಳಿ ಎಸಗುವ ಸಾಧ್ಯತೆ ಇದೆ ಎಂದು ಗುಪ್ತಚರ ದಳ ಹೇಳಿದೆ. ಈ ಬಗ್ಗೆ ಉಗ್ರರ ಸಮೂಹಗಳು ಪರಸ್ಪರ ಟೆಲಿಫೋನ್‌ನಲ್ಲಿ ಮಾತನಾಡಿಕೊಂಡಿರುವುದನ್ನು ತಾವು ಕದ್ದಾಲಿಸಿರುವುದಾಗಿ ಗುಪ್ತಚರ ದಳ ಹೇಳಿದ್ದು ಪ್ರಧಾನಿ ಮೋದಿ ಅವರ ಭದ್ರತೆಯನ್ನು ಅತ್ಯಂತ ಗರಿಷ್ಠ ಮಟ್ಟದಲ್ಲಿ ಏರ್ಪಡಿಸಲಾಗುವುದು ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here