ಬುಧ ಸಂಕ್ರಮಣ…ಇದು ಶುಭವೇ…?

0
286

 
ರಾಷ್ಟ್ರೀಯ ವರದಿ
ಸೂರ್ಯ, ಬುಧ ಮತ್ತು ಭೂಮಿ ಒಂದೇ ರೇಖೆಯಲ್ಲಿ ಸಮಾನಾಂತರವಾಗಿ ಸಂಚರಿಸುತ್ತಿರುವಾಗ ಆಗುವ ವಿದ್ಯಮಾನ ಬುಧ ಸಂಕ್ರಮಣ. ಸೌರಮಂಡಲದ ಚಿಕ್ಕ ಗ್ರಹವಾದ ಬುಧ ಗ್ರಹ ಸೂರ್ಯನ ಮೇಲೆ ಕಪ್ಪುಚುಕ್ಕೆಯಂತೆ ಒಂದು ಬದಿಯಿಂದ ಇನ್ನೊಂದು ಬದಿಗೆ ಸಂಚರಿಸುವ ದೃಶ್ಯ ಭೂಮಿಯಿಂದ ಕಂಡುಬರುತ್ತದೆ.ಇದು ನೂರು ವರ್ಷಗಳ ಅವಧಿಯಲ್ಲಿ ಕೇವಲ ಹದಿಮೂರು ಬಾರಿ ಮಾತ್ರವೇ ಸಂಭವಿಸುತ್ತದೆ.ಸೂರ್ಯನ ಎದುರು ಕಪ್ಪು ಬಿಂದುವಿನಂತೆ ಕಾಣುವ ಬುಧ ಗ್ರಹ ಹಾದುಹೋಗುವ ದೃಶ್ಯವನ್ನು ಭಾರತವೂ ಸೇರಿದಂತೆ ಜಗತ್ತಿನ ನಾನಾ ಭಾಗಗಳಲ್ಲಿ ಖಗೋಳಾಭ್ಯಾಸಿಗಳು ಆಸಕ್ತರು ಸೋಮವಾರ ವೀಕ್ಷಿಸಿದರು.ಸಾಮಾನ್ಯವಾಗಿ ಮೇ ಮತ್ತು ನವೆಂಬರ್ ತಿಂಗಳುಗಳಲ್ಲೇ ಈ ಸಂಕ್ರಮಣ ವಾಗುತ್ತದೆ. ಇತ್ತೀಚೆಗೆ ಅಂದರೆ 2006ರ ನವೆಂಬರ್ 6ರಂದು ಇದು ಸಂಭವಿಸಿತ್ತು.
 
 
ಏಷ್ಯಾ ದ ಬಹುತೇಕ ಭಾಗಗಳು, ಯುರೋಪ್, ಆಫ್ರಿಕಾ, ಗ್ರೀನ್​ಲ್ಯಾಂಡ್, ದಕ್ಷಿಣ ಅಮೇರಿಕ, ಉತ್ತರ ಅಮೆರಿಕ, ಆರ್ಕ್​ಟಿಕ್, ಉತ್ತರ ಅಟ್ಲಾಂಟಿಕ್ ಸಾಗರ ಮತ್ತು ಪೆಸಿಫಿಕ್ ಸಾಗರದ ಬಹುತೇಕ ಪ್ರದೇಶಗಳಲ್ಲಿರುವವರು ಈ ವಿದ್ಯಮಾನವನ್ನು ಸೋಮವಾರ ವೀಕ್ಷಿಸಿದ್ದಾರೆ.
 
 
ಭೂಮಿಯಂತೆಯೇ ವಾಸಯೋಗ್ಯ ಹೊಸ ವಸತಿ ಪ್ರದೇಶವನ್ನು ಅರಸುವ ಮಾನವ ಸಾಹಸ ಇಂದು ನಿನ್ನೆಯದ್ದಲ್ಲ. ಅನ್ಯಗ್ರಹಗಳಲ್ಲಿ ವಾಸ ಸಾಧ್ಯವೇ ಎಂಬ ಸಂಶೋಧನೆ ಅನಾದಿ ಕಾಲದಿಂದಲೂ ನಡೆಯುತ್ತಿದೆ. ಸೂರ್ಯನಿಗೆ ಸಮೀಪವಿರುವ ಬುಧನ ಬಗ್ಗೆ ಖಗೋಳ ಶಾಸ್ತ್ರಜ್ಞರಿಗೆ ಅದೇನೋ ಪ್ರೀತಿ. ಬುಧನಲ್ಲಿ ವಾಸ ಸಾಧ್ಯವೇ ಎಂಬಿತ್ಯಾದಿ ಸಂಶೋಧನೆಗಳು ನಡೆಯುತ್ತಲೇ ಇವೆ. ಮೊಟ್ಟ ಮೊದಲ ಬಾರಿ ಬುಧ ಸಂಕ್ರಮಣವನ್ನು ದಾಖಲಿಸಿದ್ದು 1631ರಲ್ಲಿ. ಅಂದು ಫ್ರೆಂಚ್ ಖಗೋಳ ಶಾಸ್ತ್ರಜ್ಞ ಪಿರ್ರೆ ಗಸ್ಸೆಂಡಿಟೆಲಿಸ್ಕೋಪ್ ಮೂಲಕ ಪತ್ತೆಹಚ್ಚಿದ್ದರು. ಇದಕ್ಕೂ ಮುನ್ನ ಈ ವಿದ್ಯಮಾನವನ್ನು ಜರ್ಮನ್ ಖಗೋಳ ಶಾಸ್ತ್ರಜ್ಞ ಜೊಹಾನ್ಸ್ ಕೆಪ್ಲರ್ ಖಚಿತವಾಗಿ ಅಂದಾಜಿಸಿದ್ದರೂ, ಅದನ್ನು ಸಾಕ್ಷೀಕರಿಸುವ ಮುನ್ನವೇ ಅಂದರೆ 1630ರಲ್ಲಿ ನಿಧನರಾದರು.

LEAVE A REPLY

Please enter your comment!
Please enter your name here