ಬೀದಿಗಳಿದ ಕೋಣಗಳು…

0
496

ಮೂಡುಬಿದಿರೆ ಪ್ರತಿನಿಧಿ ವರದಿ
ಕಂಬಳ ಗದ್ದೆಗೆ ಕೋಣಗಳು ಇಳಿಲೇಬೇಕು… ಕಂಬಳವಿಲ್ಲದೇ ಕರಾವಳಿಯ ಮನರಂಜನೆಗಿಲ್ಲ ಸೊಗಸು…ಕಡಲ ಮುತ್ತು ಮೀನು, ಕರಾವಳಿ ಸೊತ್ತು ಕಂಬಳ… ಕಂಬಳ ಕ್ರೀಡೆಗೆ ಅನುಮತಿಗಾಗಿ ಬೃಹತ್ ಹೋರಾಟ… ಬೇಕೇ ಬೇಕು ಕಂಬಳ ಕ್ರೀಡೆ ಬೇಕು… ನಮಗೂ ಓಡೋಕೆ ಅವಕಾಶ ಕೊಡಿ ಸ್ವಾಮಿ…ಎಂದು ಫಲಕಗಳ ಮೂಲಕ ಶನಿವಾರ ಮೂಡಬಿದಿರೆ ಸ್ವರಾಜ್ ಮೈದಾನದಲ್ಲಿ ಕಂಬಳ ಕಹಳೆ ಮೊಳಗಿದೆ.
 
 
 
ಕಂಬಳ ಕ್ರೀಡೆಗೆ ನೀಡಿರುವ ತಡೆಯಾಜ್ಞೆ ತೆರವಿಗೆ ಒತ್ತಾಯವಾಗಿ ಹಾಗೂ ಕಂಬಳ ಕ್ರೀಡೆಗೆ ಅನುಮತಿಗಾಗಿ ಪ್ರತಿಭಟನಾ ಮೆರವಣಿಗೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಸ್ವರಾಜ್ ಮೈದಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಇಲ್ಲಿನ ಕಡಲಕೆರೆ ನಿಸರ್ಗಧಾಮ ತಲುಪಿದೆ.
 
 
 
200 ಜೋಡಿ ಕೋಣಗಳ ಜತೆ ಹೋರಾಟಗಾರರು ಕಾಲ್ನಡಿಗೆಯಲ್ಲಿ ಪ್ರತಿಭಟನಾ ಮೆರವಣಿಗೆ ಸಾಗಿದೆ. ಮೂರು ಕಿಲೋಮೀಟರ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆದಿದೆ. ಕಂಬಳಕ್ಕೆ ಆಗ್ರಹಿಸಿ ಮೂಡಬಿದಿರೆಯಲ್ಲಿ ಜನಸಾಗರ ಸೇರಿದೆ. ಕಡಲಕೆರೆ ನಿಸರ್ಗಧಾಮದಲ್ಲಿ ಕಂಬಳ ಕ್ರೀಡೆ ಕೆರೆ ನಿರ್ಮಾಣ, ಪೇಟಾ ವಿರುದ್ಧ ಕಂಬಳ ಪರ ಹೋರಾಟಗಾರರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
 
 
ಮೆರವಣಿಗೆಯಲ್ಲಿ ಸಂಸದ ನಳಿನ್ ಕುಮಾರ್ ಕಟಿಲು, ಶಾಸಕ ವಿನಯ್ ಕುಮಾರ್ ಸೊರಕೆ ಸೇರಿದಂತೆ ಅನೇಕ ರಾಜಕೀಯ ಮುಖಂಡರು ಪಾಲ್ಗೊಂಡಿದ್ದರು. ಚೆಂಡೆ ವಾದ್ಯಗಳು ಮೆರವಣಿಗೆಯಲ್ಲಿ ಮೊಳಗಿದವು. ಇನ್ನು ಕನ್ನಡ, ತುಳು ಚಿತ್ರರಂಗದ ಅನೇಕ ಕಲಾವಿದರು, ರಂಗ ಕಲಾವಿದರು ಮೆರವಣಿಗೆಯಲ್ಲಿ ಹಾಜರಿದ್ದರು.
 
ಮುಂಜಾಗ್ರತಾ ಜಿಲ್ಲಾಡಳಿತರಿಂದ ಪೊಲೀಸ್ ಭದ್ರತೆ ನೀಡಲಾಗಿದೆ. ಮೂಡಬಿದಿರೆಯಲ್ಲಿ 500ಕ್ಕೂ ಹೆಚ್ಚು ಪೊಲೀಸರಿಂದ ಬಿಗಿಭದ್ರತೆ ಮಾಡಲಾಗಿದೆ.

LEAVE A REPLY

Please enter your comment!
Please enter your name here