ಬಿ ಎಂ ಸಿ :ಯಾವಪಕ್ಷಕ್ಕೂ ಸ್ಪಷ್ಟ ಬಹುಮತವಿಲ್ಲ

0
232

ಪಾಲಿಕೆ ಪಾಲಾಗಬೇಕಾದರೆ 114 ಮ್ಯಾಜಿಕ್ ನಂಬರ್!
ತೀವ್ರ ಕುತೂಹಲ ಹಾಗೂ ಜಿದ್ದಾಜಿದ್ದಿಯ ಕಣವೆಂದೇ ಬಿಂಬಿಸಲ್ಪಟ್ಟ ಬಿ ಎಂ ಸಿ ಚುನಾವಣೆ (ಬೃಹತ್ ಮುಂಬೈ ಮಹಾನಗರ ಪಾಲಿಕೆ) ಫಲಿತಾಂಶ ಹೊರಬಿದ್ದಿದ್ದು ಶಿವ ಸೇನೆ ಹಾಗೂ ಬಿಜೆಪಿ ಪ್ರಾರಮ್ಯ ಮೆರೆದಿದೆ. ಒಟ್ಟು ಸದಸ್ಯ ಬಲದ ಪೈಕಿ 84ರಲ್ಲಿ ಶಿವಸೇನೆ 81ರಲ್ಲಿ ಬಿಜೆಪಿ 31ರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತವಿಲ್ಲ. 114 ಮ್ಯಾಜಿಕ್ ನಂಬರ್.
227 ಸದಸ್ಯ ಬಲ ಹೊಂದಿರುವ ಬಿಎಂಸಿ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ಬೆಳಗ್ಗೆ 8 ಗಂಟೆಯಿಂದ ಆರಂಭವಾಗಿತ್ತು. ಅಧಿಕಾರದ ಚುಕ್ಕಾಣಿಗೆ ಏನು ಕಸರತ್ತು ನಡೆಯಲಿದೆಯೋ ಕಾದು ನೋಡಬೇಕಾಗಿದೆ.

LEAVE A REPLY

Please enter your comment!
Please enter your name here