ಬಿಸಿಯೂಟಕ್ಕೆ ಚಾಲನೆ

0
204

ಮ0ಗಳೂರು ಪ್ರತಿನಿಧಿ ವರದಿ
ನಗರದ ಬಲ್ಮಠ ಸರಕಾರಿ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಬಿಸಿಯೂಟ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
 
 
 
ಕಾಲೇಜಿನ 818 ವಿದ್ಯಾರ್ಥಿನಿಯರಿಗೆ ಮಂಗಳೂರಿನ ಮೇರಿಹಿಲ್ ದಿಯಾ ಸಿಸ್ಟಮ್ಸ್‍ನ ಕಾರ್ಯನಿರ್ವಹಣಾ ಅಧಿಕಾರಿಯಾಗಿರುವ ಡಾ. ರವಿಚಂದ್ರನ್ ಇವರ ಆರ್ಥಿಕ ನೆರವು ಮತ್ತು ಇಸ್ಕಾನ್ ಸಂಸ್ಥೆಯ ಸಹಕಾರದಿಂದ ಉಚಿತವಾಗಿ ಮಧ್ಯಾಹ್ನದ ಬಿಸಿಯೂಟವನ್ನು ಏರ್ಪಡಿಸಲಾಗಿದೆ. ಮುಂದಿನ ವರ್ಷದಿಂದ ಇನ್ನೂ ಹೆಚ್ಚಿನ ದಾನಿಗಳ ಸಹಕಾರದಿಂದ ಈ ಕಾರ್ಯಕ್ರಮ ನಿರಂತರವಾಗಿ ಮುಂದುವರಿಯುವುದು.
 
 
ಶಾಸಕ ಜೆ.ಆರ್.ಲೋಬೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇಸ್ಕಾನ್ ಸಂಸ್ಥೆಯ ಕಾರುಣ್ಯ ಸಾಗರ ದಾಸ್, ನಂದನ ಆಚಾರ್ಯ ದಾಸ್, ಸಂಸ್ಥೆಯ ನಿವೃತ್ತ ಪ್ರಾಚಾರ್ಯ ಪಿ.ಪಿ ಜೋಸೆಫ್, ಪ್ರಾಚಾರ್ಯರಾದ ಮಾರ್ಯೆಟ್ ಜೆ ಮಸ್ಕರೇನಸ್, ಎಂಆರ್‍ಪಿಎಲ್ ಜನರಲ್ ಮ್ಯಾನೇಜರ್ ಬಿ.ಎಚ್ ವಿ ಪ್ರಸಾದ್, ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕಿ ಮೀರಾ ಅರಾನ್ಹ, ಕಾರ್ಪೋರೇಟರ್ ಎ.ಸಿ. ವಿನಯರಾಜ್, ಲಯನ್ಸ್ ಕ್ಲಬ್ ನ ರೋನಾಲ್ಡ್ ಮಸ್ಕರೇನಸ್, ಫಾ. ಜೆರೋಮ್ ಸೇಕ್ರೇಡ್, ಪ್ರೊ.ರಮಾನಾಥ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here