ಬಿಸಿಬೇಳೆ ಭಾತ್

0
674

 
ವಾರ್ತೆ ರೆಸಿಪಿ
ಬೇಕಾಗುವ ಸಾಮಾಗ್ರಿಗಳು:
ಅಕ್ಕಿ: 350ಗ್ರಾಂ., ತರಕಾರಿಗಳು 500ಗ್ರಾಂ., ಸಾಸಿವೆ 1 ಚ., ಕರಿಬೇವು 5 ಎಸಳು, ತೊಗರಿಬೇಳೆ 200ಗ್ರಾಂ., ಬೇಳೆಭಾತ್ ಪುಡಿ 20ಗ್ರಾಂ., ಅಡುಗೆ ಎಣ್ಣೆ 20ಗ್ರಾಂ., ಉಪ್ಪು ರುಚಿಗೆ.
 
 
 
ತಯಾರಿಸುವ ವಿಧಾನ:
ಅಕ್ಕಿಯನ್ನು ನೀರಿನಲ್ಲಿ ತೊಳೆದು ಪಾತ್ರೆಗೆ ಹಾಕಿ. ನಂತರ ಹಚ್ಚಿದ ತರಕಾರಿಗಳನ್ನು ಹಾಕಿ ಬೇಳೆ ಮತ್ತು ನೀರು ಹಾಕಿ ಪಾತ್ರೆಯನ್ನು ಒಲೆಯ ಮೇಲಿಟ್ಟು ಬೇಯಿಸಿ. ಬೇಯಿಸುವಾಗ ಬೇಳೆ ಭಾತ್ ಪುಡಿ ಹಾಕಿ. ಸಾಸಿವೆ ಒಗ್ಗರಣೆ ಆದ ಮೇಲೆ ಕರಿಬೇವು, ಕೆಂಪು ಮೆಣಸಿನಕಾಯಿ ಹಾಗೂ ಕಡಲೆಕಾಯಿ ಬೀಜಗಳನ್ನು ಹುರಿದು ಹಾಕಿ. ಪಾತ್ರೆಯನ್ನು ಒಲೆಯಿಂದ ಇಳಿಸಿ ಆರಲು ಬಿಡಿ. ಸ್ವಲ್ಪ ಆರಿದ ಮೇಲೆ ತಟ್ಟೆಗಳಿಗೆ ಹಾಕಿ ಚಿಪ್ಸ್ ಗಳೊಂದಿಗೆ ಬಡಿಸಿ.

LEAVE A REPLY

Please enter your comment!
Please enter your name here