ಬಿಜೆಪಿ ಶಕೆ ಆರಂಭ…ಜೆಡಿಎಸ್‌ ನಲ್ಲಿ ಆತಂಕ!

0
854

ವಾರ್ತೆ ವಿಶೇಷ
ಹಾಸನ: ರಾಜ್ಯದಲ್ಲಿ ಬಿಜೆಪಿ ಶಕೆ ಅಕ್ಷರಶಃ ಆರಂಭವಾಗಿದೆ. ಈತನಕ ರಾಜ್ಯದ ಚುಕ್ಕಾಣಿ ಹಿಡಿದಿರುವ ಸಮ್ಮಿಶ್ರ ಸರ್ಕಾರ ಅದರಲ್ಲೂ ಜೆಡಿಎಸ್‌ ನ ಕುಮಾರ ಸ್ವಾಮಿಯಾದಿಯಾಗಿ, ದೇವೇಗೌಡರಿಂದ ತೊಡಗಿ ಪ್ರಜ್ವಲ್‌ ತನಕ ಪ್ರತಿಯೊಬ್ಬರಿಗೂ ಇದೀಗ ನಡುಕವುಂಟಾಗಿದೆ. ಬಿಜೆಪಿಯವರು ಎಷ್ಟು ದಿನ ಸರ್ಕಾರ ನಡೆಸುತ್ತಾರೆ ನೋಡೋಣ. ಬಂಡಾಯ ಶಾಸಕರ ವಿಚಾರದಲ್ಲಿ ಸ್ಪೀಕರ್‌ ರಮೇಶ್‌ ಕುಮಾರ್‌ ತೆಗೆದುಕೊಂಡ ನಿರ್ಧಾರ ಸ್ವಾಗತಾರ್ಹ ಎಂದು ಸಂಸದ ಪ್ರಜ್ವಲ್‌ ರೇವಣ್ಣ ಹೇಳಿದ್ದಾರೆ. ಬಿಜೆಪಿಯವರು ಯಾವ ರೀತಿ ಅಧಿಕಾರ ಹಿಡಿದಿದ್ದಾರೆ ಎಂಬುದು ದೇಶಕ್ಕೆ ಗೊತ್ತಿದೆ.ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ಹೇಳುವ ಮೂಲಕ ತಮ್ಮ ಅಸಮಾಧಾನ, ಆತಂಕಗಳನ್ನು ಹೊರಹಾಕಿದ್ದಾರೆ.
ಒಟ್ಟಿನಲ್ಲಿ ಒಂದೆಡೆ ಪ್ರಜ್ವಲ್‌ ರೇವಣ್ಣ, ಒಂದೆಡೆ ಕುಮಾರಸ್ವಾಮಿ ಮತ್ತೊಂದೆಡೆ ದೇವೇಗೌಡ ಹೀಗೆ ತಮ್ಮ ತಮ್ಮ ಅಭಿಪ್ರಾಯ ಹೊರ ಹಾಕುವ ಮೂಲಕ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here