ಬಿಜೆಪಿ ಕಾರ್ಯಕಾರಿಣಿ ಸಭೆ ಆರಂಭ

0
477

ಕಲಬುಗರಿ ಪ್ರತಿನಿಧಿ ವರದಿ
ಕಲಬುರಗಿಯಲ್ಲಿ ಇಂದಿನಿಂದ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಲಿದೆ. ಭಿನ್ನಮತದ ಬೇಗುದಿಯ ನಡುವೆ ಇಂದಿನಿಂದ ಎರಡು ದಿನಗಳ ಕಾಲ ಸಭೆ ನಡೆಯಲಿದೆ. ನಾಳೆ ಅಫ್ಜಲ್ ಪುರದಲ್ಲಿ ರಾಯಣ್ಣ ಬ್ರಿಗೇಡ್ ಜಿಲ್ಲಾ ಸಮಾವೇಶ ನಡೆಯಲಿದೆ. ಸ್ವತಃ ಪರಿಷತ್ ವಿಪಕ್ಷ ನಾಯಕ ಕೆ ಎಸ್ ಈಶ್ಚರಪ್ಪನವರೇ ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ. ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ವೈ, ಸಂಸದೆ ಶೋಭಾ ಕರಂದ್ಲಾಜೆ, ಪರಿಷತ್ ವಿಪಕ್ಷ ನಾಯಕ ಕೆ ಎಸ್ ಈಶ್ಚರಪ್ಪ, ಕೇಂದ್ರ ಸಚಿವ ಸದಾನಂದ ಗೌಡ, ಜಗದೀಶ್ ಶೆಟ್ಟರ್ ಸೇರಿ ಹಲವು ಬಿಜೆಪಿ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
 
 
ಪಕ್ಷದ ಅಸಮಾಧಾನದ ಚರ್ಚೆ ಇಲ್ಲ: ಡಿವಿಎಸ್
ಕಾರ್ಯಕಾರಿಣಿಯಲ್ಲಿ ಪಕ್ಷದ ಅಸಮಾಧಾನದ ಚರ್ಚೆ ಇಲ್ಲ. ಕೇವಲ ಪಕ್ಷ ಸಂಘಟನೆ ಮತ್ತು ರಾಜ್ಯ ಸರ್ಕಾರದ ವಿಫಲತೆಗಳನ್ನು ಮಾತ್ರ ಚರ್ಚಿಸಲಾಗುತ್ತದೆ ಎಂದು ಕಲಬುರಗಿಯಲ್ಲಿ ಕೇಂದ್ರ ಸಚಿವ ಸದಾನಂದ ಗೌಡರು ತಿಳಿಸಿದ್ದಾರೆ.
ಕೋರ್ ಕಮಿಟಿ ಸಭೆಯಲ್ಲಿ ಎಲ್ಲಾ ವಿಚಾರದ ಬಗ್ಗೆ ಚರ್ಚೆ ಮಾಡುತ್ತೇವೆ. ಕಾರ್ಯಕಾರಿಣಿಯಲ್ಲಿ ಸಂಘಟನೆ ಕುರಿತು ಚರ್ಚೆ ಆಗಲಿದೆ. ನಾನು ಅಧ್ಯಕ್ಷನಾದಾಗಳು ಇಂತಹ ವಿದ್ಯಮಾನ ನಡೆದಿತ್ತು. ಬಿಜೆಪಿಯ ವಿಚಾರವೇ ಹೆಚ್ಚು ಬ್ರೇಕಿಂಗ್ ನ್ಯೂಸ್ ಆಗುತ್ತಿತ್ತು.

LEAVE A REPLY

Please enter your comment!
Please enter your name here