ಬಿಜೆಪಿಯಲ್ಲಿ ಸಂತಸ

0
257

ಮಂಗಳೂರು ಪ್ರತಿನಿಧಿ ವರದಿ
ಗಣಿ ಕಂಪೆನಿಗೆಪರವಾನಗಿ ನೀಡಿದಕ್ಕೆ ಪ್ರತಿಯಾಗಿ ಪ್ರೇರಣಾ ಟ್ರಸ್ಟ್ ಮೂಲಕ ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂಬ ಕೇಸ್‌ಗೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೇಲಿನ ಎಲ್ಲಾ ಆರೋಪವನ್ನು ಸಿಬಿಐ ವಿಶೇಷ ಕೋರ್ಟ್ ಖುಲಾಸೆಗೊಳಿಸಿರುವುದು ನ್ಯಾಯಾಂಗದ ಘನತೆಯನ್ನು ಹೆಚ್ಚಿಸಿದೆ ಎಂದು ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು ಹೇಳಿದ್ದಾರೆ.
 
ಆರೋಪದಿಂದ ಮುಕ್ತರಾಗಿರುವುದು ಭಾರತೀಯ ಜನತಾ ಪಾರ್ಟಿ ಮತ್ತು ಕಾರ್ಯಕರ್ತರಿಗೆ ಹರ್ಷತಂದಿದೆ. ಮುಂಬರುವ ಚುನಾವಣೆಯಲ್ಲಿ ಭಾ.ಜ.ಪ. ಪಕ್ಷ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಮತ್ತಷ್ಟು ಬಲಗೊಳ್ಳುವುದರೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೇರಲು ಇದು ಸಹಕಾರಿಯಾಗಲಿದೆ.
 
 
ವ್ಯಕ್ತಿಯ ಏಳ್ಗೆಯನ್ನು ಸಹಿಸದೇ ರಾಜಕೀಯ ಪ್ರೇರಿತ ಸುಳ್ಳು ಆರೋಪಗಳ ಮಾಡುವವರಿಗೆ ಈ ಪ್ರಕರಣ ಪಾಠವಾಗಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here