ಬಿಜೆಪಿಗೆ ಹಿಂದುಳಿದ ವರ್ಗದ ಅಪಾರ ಬೆಂಬಲ- ಬಿ.ಎಸ್.ವೈ

0
247

 
ನಮ್ಮ ಪ್ರತಿನಿಧಿ ವರದಿ
ರಾಜ್ಯದಾದ್ಯಂತ ನನ್ನ ಪ್ರವಾಸದಲ್ಲಿ ಹಿಂದುಳಿದ ವರ್ಗದವರು ಹಾಗೂ ದಲಿತರು ಬಿಜೆಪಿಗೆ ಅಪಾರ ಬೆಂಬಲ ನೀಡುತ್ತಿದ್ದಾರೆ. ನನ್ನ ನೇತೃತ್ವದ ಹಿಂದಿನ ಬಿಜೆಪಿ ಸರ್ಕಾರದ ಸಂದರ್ಭದಲ್ಲಿ ಹಿಂದುಳಿದವರಿಗಾಗಿ ನಾವು ರೂಪಿಸಿದ ಯೋಜನೆಗಳು, ದಲಿತರಿಗೆ ಮತ್ತು ಹಿಂದುಳಿದವರಿಗೆ ಭಾರತೀಯ ಜನತಾ ಪಕ್ಷದ ಬಗ್ಗೆ ವಿಶ್ವಾಸವನ್ನು ಹೆಚ್ಚಿಸಿದೆ. ಅಹಿಂದದ ಹೆಸರಿನಲ್ಲಿ ಸಿದ್ಧರಾಮಯ್ಯನವರು ಮಾಡಿದ ಗೊಂದಲ ಮತ್ತು ಬಜೆಟ್ ನಲ್ಲಿ ಮೀಸಲಿರಿಸಿದ ಹಣದ ಉಪಯೋಗವೇ ಮಾಡದೇ ಕೆಳವರ್ಗದ ಜನತೆಗೆ ಎಸಗಿದ ಅನ್ಯಾಯಗಳನ್ನು ಮುಗ್ಧ ಜನತೆಗೆ ತಿಳಿಸಬೇಕಾದ ಅಗತ್ಯವಿದೆ. ಜನಪರ ಹೋರಾಟದ ಮೂಲಕ ಸರಕಾರದ ವೈಫಲ್ಯವನ್ನು ಜನರಿಗೆ ತಲುಪಿಸಿ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರು ಕಾರ್ಯಕರ್ತರನ್ನು ಉದ್ದೇಶಿಸಿ ಹೇಳಿದರು.
 
 
ರಾಜ್ಯ ಬಿಜೆಪಿ ಕಾರ್ಯಲಯ ಜಗನ್ನಾಥ ಭವನದಲ್ಲಿ ನಡೆಸಿದ ರಾಜ್ಯ ಹಿಂದುಳಿದ ವರ್ಗ ಮೋರ್ಚಾದ ಪ್ರಮುಖರ ಸಭೆಯಲ್ಲಿ ಸನ್ಮಾನವನ್ನು ಸ್ವೀಕರಿಸಿ ಯಡಿಯೂರಪ್ಪ ಮಾತನಾಡಿದರು. ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಲು ಹೊದಿಸಿ ಭಾರತಾಂಬೆಯ ಚಿತ್ರವಿರುವ ನೆನಪಿನ ಕಾಣಿಕೆ ನೀಡಿ ಅಭಿನಂದಿಸಿ ಬಿಜೆಪಿ ಮೋರ್ಚಾ ರಾಜ್ಯಾಧ್ಯಕ್ಷ ಕೋಟ ಶ್ರೀನಿವಾಸ ಪೂಜಾರಿಯವರು ಮಾತನಾಡಿ ಬಿಡಿಬಿಡಿಯಾಗಿ ಚದುರಿಹೋಗಿರುವ ಹಿಂದುಳಿದ ವರ್ಗಗಳು ಒಟ್ಟಾಗಿ ಸೆಟೆದು ನಿಂತು ತಮ್ಮ ಅಭಿವೃದ್ಧಿಯ ಕಡೆ ಗಮನಕೊಡುವುದರೊಂದಿಗೆ ಬಿಜೆಪಿಯ ಮೂಲಕ ಸಂಘಟನೆಯ ಶಕ್ತಿ ಪ್ರದರ್ಶಿಸಬೇಕೆಂದು ಮನವಿ ಮಾಡಿಕೊಂಡರು. ಸಮಾರಂಭದಲ್ಲಿ ಹಿಂದುಳಿದ ವರ್ಗಗಳ ಲೋಕಸಭೆ, ವಿಧಾನಸಭೆ, ವಿಧಾನ ಪರಿಷತ್ತಿನ ಶಾಸಕರು, ಸಂಸದರು ಸಹಿತ ಹಿಂದುಳಿದ ವರ್ಗಗಳ ಪ್ರಮುಖ ನಾಯಕರು ಭಾಗವಹಿಸಿದರು.

LEAVE A REPLY

Please enter your comment!
Please enter your name here