ಬಿಗ್‌ ಬ್ರೇಕಿಂಗ್:ಮೂಡುಬಿದಿರೆಯ ವ್ಯಕ್ತಿ ಕೊರೊನಾಗೆ ಬಲಿ

0
6385

ಮೂಡುಬಿದಿರೆ: ಕಿಲ್ಲರ್‌ ಕೊರೊನಾ ಮೂಡುಬಿದಿರೆಯಲ್ಲಿ ಕೇಕೆ ಹಾಕಿ ನರ್ತಿಸುತ್ತಿದೆ. ಮೂಡುಬಿದಿರೆಯ ಕೋಟೆಬಾಗಿಲು ನಿವಾಸಿಯೊಬ್ಬರು ಇಂದು ಮೃತಪಟ್ಟಿದ್ದಾರೆ. ಮಂಗಳೂರಿನಲ್ಲಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ವ್ಯಕ್ತಿಯ ಗಂಟಲು ದ್ರವ ಪರೀಕ್ಷೆ ಮಾಡಿದ ಸಂದರ್ಭ ಕೊರೊನಾ ಇರುವುದು ಪತ್ತೆಯಾಗಿದೆ. ಇದೀಗ ಮೂಡುಬಿದಿರೆ ಪರಿಸರದ ಜನತೆ ಇದೀಗ ಭೀತಿಯಲ್ಲಿದ್ದಾರೆ.
೫೨ವರುಷದ ವ್ಯಕ್ತಿಯಾಗಿದ್ದು ಕೆಲವು ದಿನಗಳಿಂದ ಖಾಯಿಲೆಯಿಂದ ಬಳಲುತ್ತಿದ್ದು ಮಂಗಳೂರಿನ ಖಾಸಗೀ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಮೃತಪಟ್ಟಿದ್ದಾರೆ.
ಸರಕಾರಿ ನಿಯಮದಂತೆ ಅಂತ್ಯ ಸಂಸ್ಕಾರ: ಮೃತ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ಸರಕಾರೀ ನಿಯಮದಂತೆ ನಡೆಸಲಾಗುತ್ತದೆ ಎಂದು ತಹಶೀಲ್ದಾರ್‌ ಅನಿತಾ ಲಕ್ಷ್ಮಿ ತಿಳಿಸಿದ್ದಾರೆ. ಈ ವ್ಯಕ್ತಿಯ ಮನೆಯನ್ನು ಸೀಲ್‌ ಡೌನ್‌ ಮಾಡಲಾಗುತ್ತದೆ. ಮನೆಯವರನ್ನು ಕ್ವಾರಂಟೈನ್‌ ವ್ಯವಸ್ಥೆಗೊಳಪಡಿಸುವುದಲ್ಲದೆ ಪ್ರತಿಯೊಬ್ಬರ ಗಂಟಲು ದ್ರವ ಮಾದರೀ ಸಂಗ್ರಹಿಸಿ ಪರೀಕ್ಷಿಸಲಾಗುವುದು ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here