ಬಿಎಸ್ ವೈ ವಿರುದ್ಧ ಮಾನನಷ್ಟ ಮೊಕದ್ದಮೆ!

0
323

ಬೆಂಗಳೂರು ಪ್ರತಿನಿಧಿ ವರದಿ
ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗುವ ಸಾಧ್ಯತೆ ಇದೆ. ಬೆಂಗಳೂರು ಅಭಿವೃದ್ಧಿ ಖಾತೆ ಸಚಿವ ಕೆ ಜೆ ಜಾರ್ಜ್ ಬಿಎಸ್ ವೈ ವಿರುದ್ಧ ಮೊಕದ್ದಮೆ ಹೂಡಲು ನಿರ್ಧರಿಸಿದ್ದಾರೆ.
 
 
 
ಕೆ ಜೆ ಜಾರ್ಜ್ ವಿರುದ್ಧ ಬಿಎಸ್ ವೈ ಬಹಿರಂಗ ಆರೋಪ ಹಿನ್ನೆಲೆಯಲ್ಲಿ ಮಾನನಷ್ಟ ಮೊಕದ್ದಮೆಗೆ ನಿರ್ಧರಿಸಿದ್ದಾರೆ. ಬೆಂಗಳೂರಿನಲ್ಲಿ ಉಕ್ಕಿನ ಸೇತುವೆ ನಿರ್ಮಾಣಕ್ಕಾಗಿ 400 ಕೋಟಿ ರೂ. ಕಿಕ್ ಬ್ಯಾಕ್ ಪಡೆದಿದ್ದಾರೆಂದು ಬಿಎಸ್ ವೈ ಅವರು ಜಾರ್ಜ್ ವಿರುದ್ಧ ಆರೋಪಿಸಿದ್ದರು. ಈಗ ಜಾರ್ಜ್ ಆರೋಪ ಸಾಬೀತುಪಡೆಸುವಂತೆ ಬಿಎಸ್ ಬೈಗೆ ಸವಾಲು ಹಾಕಿದ್ದಾರೆ.ಹೀಗಾಗೆ ಬಿಎಸ್ ವೈ ವಿರುದ್ಧ ಮೊಕದ್ದಮೆ ಹೂಡಲು ಜಾರ್ಜ್ ಸಿದ್ಧತೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here