ಬಿಎಸ್ ವೈ ಗೆ ಮತ್ತೆ ಸಂಕಷ್ಟ

0
378

ಬೆಂಗಳೂರು ಪ್ರತಿನಿಧಿ ವರದಿ
ಬಿಎಸ್ ಯಡಿಯೂರಪ್ಪರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಬಿಎಸ್ ವೈ ಡಿ ನೋಟಿಫಿಕೇಷನ್  ಕೇಸ್ ಮೇಲ್ಮನವಿ ಸಲ್ಲಿಕೆಗೆ ಸರ್ಕಾರ ನಿರ್ಧರಿಸಿದೆ.
 
 
ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿಎಸ್ ವೈ ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಬೆಂಗಳೂರಿನಲ್ಲಿ ಕಾನೂನು ಸಚಿವ ಟಿ ಬಿ ಜಯಚಂದ್ರ ಹೇಳಿದ್ದಾರೆ.
 
 
ಒಟ್ಟು 16 ಪ್ರಕರಣಗಳ ಪೈಕಿ 15 ಪ್ರಕರಣಗಳಲ್ಲಿ ಬಿಎಸ್ ವೈ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಕೆಲಕಾರಣಗಳಿಂದ ಹೈಕೋರ್ಟ್ ನಲ್ಲಿ ಕೇಸ್ ಗಳು ರದ್ಧಾಗಿತ್ತು. ಆದರೆ ಈಗ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿ ಸುವುದಕ್ಕೆ ನಿರ್ಧರಿಸಲಾಗಿದೆ.
 
ಈ ಪ್ರಕ್ರಿಯೆಗಾಗಿ ವಕೀಲ ಜೋಸೆಫ್ ಅಡಿಸ್ಟಾಟಲ್ ರನ್ನು ನೇಮಕ ಮಾಡಲಾಗಿದೆ. ಮೇಲ್ಮನವಿಗೆ ಲೋಕಾಯುಕ್ತರೂ ಸಹ ಶಿಫಾರಸು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ ಎಂದು ಜಯಚಂದ್ರ ತಿಳಿಸಿದ್ದಾರೆ.
 
ಬೆಂಗಳೂರಿನ ರಾಚೇನಹಳ್ಳಿ ಡಿ ನೋಟಿಫಿಕೇಷನ್ ಪ್ರಕರಣದಲ್ಲಿ ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ವಿರುದ್ಧ ಮೇಲ್ಮನವಿ ಸಲ್ಲಿಸುವ ಬಗ್ಗೆ ಸಂಪುಟ ಸಭೆಯಲ್ಲಿ ಇಂದು ಚರ್ಚೆಯಾಗಿತ್ತು. ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಸಚಿವರ ಮಧ್ಯೆ ಚರ್ಚೆಗಳಾಗಿವೆ. ಬಿಎಸ್ ವೈ ವಿರುದ್ಧ ಮೇಲ್ಮನವಿ ಸಲ್ಲಿಸುವ ಬಗ್ಗೆ ಮಾತುಕತೆ ನಡೆದಿತ್ತು.
 
 
ರಾಜ್ಯ ಸರ್ಕಾರ ಪ್ರಕರಣದ ಬಗ್ಗೆ ಎಎಜಿ ಪೊನ್ನಣ್ಣರಿಂದಲೂ ವರದಿ ಕೇಳಿದೆ. ಪೊನ್ನಣ್ಣ ವರದಿ ಪ್ರಕಾರ ಮೇಲ್ಮನವಿ ಸಲ್ಲಿಸಬಹುದಾಗಿದೆ. ಸುಪ್ರೀಂಕೋರ್ಟ್ ತೀರ್ಪು ಪ್ರಸ್ತಾಪಿಸಿ ಎಎಜಿ ವಿವರಣೆ ನೀಡಲಾಗಿದೆ. 2ಜಿ ಸ್ಪೆಕ್ಟ್ರಂ ಕೇಸ್ ನಲ್ಲಿ ಸಿಎಜಿ ವರದಿಯಂತೆ ಎಫ್ ಐಆರ್ ದಾಖಲಾಗಿದೆ. ಆದರೆ ಕೋರ್ಟ್ ಎಫ್ ಐಆರ್ ಸಲ್ಲಿಸಲು ಸಾಧ್ಯವಿಲ್ಲವೆಂದು ಹೇಳಿತ್ತು. ಅಲ್ಲದೆ ಬಿಎಸ್ ವೈ ವಿರುದ್ಧ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿತ್ತು.

LEAVE A REPLY

Please enter your comment!
Please enter your name here