ಬಿಎಂಟಿಸಿ ಬಸ್ ದರ 2 ರೂ. ಇಳಿಕೆ!

0
191

ಬೆಂಗಳೂರು ಪ್ರತಿನಿಧಿ ವರದಿ
ಬಿಎಂಟಿಸಿ ಬಸ್ ಪ್ರಯಾಣಿಕರಿಗೆ ಸಂತಸ ಸುದ್ದಿಯೊಂದಿದೆ. ಬಸ್ ಪ್ರಯಾಣ ದರವನ್ನು ಇಳಿಸಲು ಬಿಎಂಟಿಸಿ ಸಂಸ್ಥೆ ಮುಂದಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
 
 
 
ಸಾಮಾನ್ಯ ಬಸ್ ಗಳ 2 ನೇ ಹಂತದಲ್ಲಿ ಟಿಕೆಟ್ ದರವು 12 ರೂ. ಇದೆ. ಈಗ ಸಂಸ್ಥೆ ಸಾಮಾನ್ಯ ಬಸ್ ಗಳ 2 ನೇ ಹಂತದಲ್ಲಿ ಟಿಕೆಟ್ ದರವನ್ನು 10 ರೂ.ಗೆ ಇಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಇದರಿಂದ ಸಾಮಾನ್ಯ ಬಸ್ ಗಳ 2 ನೇ ಹಂತದಲ್ಲಿ ಟಿಕೆಟ್ ದರವು 2 ರೂ.ಗೆ ಕಡಿತವಾಗಲಿದೆ.
 
 
 
ಬಸ್ ನಲ್ಲಿ ಚಿಲ್ಲರೆ ಸಮಸ್ಯೆಯನ್ನು ಕಡಿಮೆ ಮಾಡಲು ಹಾಗೂ ಬಿಎಂಟಿಸಿ ಬಸ್ ಗೆ ಹೆಚ್ಚು ಹೆಚ್ಚು ಪ್ರಯಾಣಿಕರನ್ನು ಸೆಳೆಯುವ ಸಲುವಾಗಿ ಟಿಕೆಟ್ ದರವನ್ನು ಕಡಿಮೆಗೊಳಿಸಲು ಸಂಸ್ಥೆ ಮುಂದಾಗಿದೆ.

LEAVE A REPLY

Please enter your comment!
Please enter your name here