ಬಿಎಂಟಿಸಿಗೆ ಪ್ರಮಾಣಿಕರ ಸಂಖ್ಯೆ ಇಳಿದಿಲ್ಲ: ಸಿಎಂ

0
186

 
ಬೆಂಗಳೂರು ಪ್ರತಿನಿಧಿ ವರದಿ
ಮೆಟ್ರೋ ಬಂದ ನಂತರ ಪ್ರಯಾಣಿಕರ ಸಂಖ್ಯೆ ಇಳಿದಿಲ್ಲ. ಬಿಎಂಟಿಸಿಯಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಿದ್ಧಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ, ಪ್ರತಿನಿತ್ಯವೂ ಬಿಎಂಟಿಸಿಯಲ್ಲಿ 51 ಲಕ್ಷ ಜನರ ಪ್ರಯಾಣ ಮಾಡುತ್ತಿದ್ದಾರೆ. ಕುರಿತು ಬಿಎಂಟಿಸಿ ಎಂಡಿಗೆ ನಾನು ಮಾಹಿತಿ ಕೇಳಿದ್ದೇನೆ. ಇದಕ್ಕೆ ಅವರು ಪ್ರಯಾಣಿಕರ ಸಂಖ್ಯೆ ಇಳಿದಿಲ್ಲವೆಂದು ವಿವರ ನೀಡಿದ್ದಾರೆ. ಆದರೆ ಬೈಕ್, ಕಾರಿನಲ್ಲಿ ಪ್ರಯಾಣಿಸುವವರ ಸಂಖ್ಯೆ ಇಳಿದಿದೆ ಎಂದು ಸಿಎಂ ಸಿದ್ದು ಹೇಳಿದ್ದಾರೆ.
 
 
ಐಟಿಎಸ್ ಗೆ ಚಾಲನೆ:
ಬಿಎಂಟಿಸಿ ಸಂಸ್ಥೆಯ ಇಂಟೆಲಿಜೆಂಟ್ ಟ್ರಾನ್ಸ್ ಪೋರ್ಟ್ ಸಿಸ್ಟಮ್ (ಐಟಿಎಸ್) ಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಬೆಂಗಳೂರಿನ ಶಾಂತಿನಗರದ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಚಾಲನೆ ನೀಡಿದ್ದಾರೆ.
 
 
ಚತುರ ಸಾರಿಗೆ ವ್ಯವಸ್ಥೆ ಅಳವಡಿಸಿಕೊಂಡಿರುವ ಬಿಎಂಟಿಸಿ ದೇಶದಲ್ಲಿಯೇ ಮೊದಲು ಐಟಿಎಸ್ ಅಳವಡಿಕೆ ಸಾಧನೆಯಾಗಿದೆ. ಐಟಿಎಸ್ ಕಂಟ್ರೋಲ್ ರೂಮ್ ಗೆ ಭೇಟಿ ನೀಡಿದ್ದಾರೆ.
 
ಬಿಎಂಟಿಸಿ ಬಸ್ ಗಳ ಸಂಚಾರ ಮತ್ತಷ್ಟು ಉನ್ನತ ಮಟ್ಟಕ್ಕೇರಿದೆ. ಎಲ್ಲ ಬಿಎಂಟಿಸಿ ಬಸ್ ಗಳ ಮಾಹಿತಿ ಪ್ರಯಾಣಿಕರಿಗೆ ಲಭ್ಯವಾಗಲಿದೆ. ಬಸ್ ಗಳ ಚಲನವಲನಗಳ ಮೇಲೆ ನಿಗಾ ಇಡಲು ಪ್ರತಿಯೊಂದು ಬಿಎಂಟಿಸಿ ಬಸ್ ಗೂ ಜಿಪಿಎಸ್ ಅಳವಡಿಕೆ ಮಾಡಿದೆ ಎಂದು ಸಿಎಂ ವಿವರಿಸಿದ್ದಾರೆ.

LEAVE A REPLY

Please enter your comment!
Please enter your name here