ಬಾಹುಬಲಿ ಪ್ರಸಾದ್‌ಗೆ ಸನ್ಮಾನ

0
341
ಬಾಹುಬಲಿ ಪ್ರಸಾದ್‌ ಅವರಿಗೆ ಸನ್ಮಾನಿಸಲಾಯಿತು.

ಮೂಡುಬಿದಿರೆ:ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸಭೆಯಲ್ಲಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಜಿಲ್ಲಾ ಗ್ರಂಥಾಲಯದ ಉಪಾಧ್ಯಕ್ಷರಾದ ಮೂಡುಬಿದಿರೆಯ ಎಂ. ಬಾಹುಬಲಿ ಪ್ರಸಾದ್‍ರವರನ್ನು ಜಿಲ್ಲಾ ಗ್ರಂಥಾಲಯದ ಅಧ್ಯಕ್ಷರಾದ ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ.ಯವರು ಸನ್ಮಾನಿಸಿದರು.
ಜಿಲ್ಲಾ ಗ್ರಂಥಾಲಯದ ಸದಸ್ಯರಾದ ಕೆ.ಪಿ.ಸುಚರಿತ ಶೆಟ್ಟಿ, ರಮೇಶ್ ಶೆಟ್ಟಿ ಬೋಳಿಯಾರು ಹಾಗೂ ಸಾಹಿತಿಗಳಾದ ದೇವಿಕಾ ನಾಗೇಶ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರಾಜಶೇಖರ ಹೆಬ್ಬಾರ್, ಮುಖ್ಯ ಗ್ರಂಥಾಲಯಾಧಿಕಾರಿಯಾದ ಶ್ರೀಮತಿ ಗಾಯತ್ರಿ, ದ.ಕ. ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಪಿ.ಕೆ. ಕೃಷ್ಣ ಹಾಗೂ ಜಿಲ್ಲಾ ಕೇಂದ್ರ ಗ್ರಂಥಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here