ಬಾಳೆ ಕಾಯಿ ಕಾಪು 

0
448

 
ವಾರ್ತೆ ರೆಸಿಪಿ
ಬೇಕಾಗುವ ಸಾಮಗ್ರಿಗಳು:
ಬಾಳೆಕಾಯಿ 1, ಅಕ್ಕಿ ಹಿಟ್ಟು 1 ಲೋಟ, ಕೊತ್ತಂಬರಿ 2 ಚಮಚ, ಒಣ ಮೆಣಸು 4, ಉದ್ದು 1 ಚಮಚ, ತೆಂಗಿನ ತುರಿ 1 ಲೋಟ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ  ಸ್ವಲ್ಪ, ಹುಣಸೆ ಹುಳಿ ಸಣ್ಣ ಗೋಲಿ ಗಾತ್ರದ್ದು ಬೆಲ್ಲ ಸಣ್ಣ ಚೂರು.
 
 
ತಯಾರಿಸುವ ವಿಧಾನ:
ಅಕ್ಕಿಹಿಟ್ಟನ್ನು ಬಾಣಲೆಗೆ ಹಾಕಿ ಪರಿಮಳ ಬರುವ ತನಕ ಹುರಿದುಕೊಳ್ಳಿ. ಮಿಕ್ಸಿಯಲ್ಲಿ ಕೊತ್ತಂಬರಿ, ಒಣ ಮೆಣಸು, ಉದ್ದು, ತೆಂಗಿನ ತುರಿ, ಉಪ್ಪು, ಹುಣಸೆ,  ಬೆಲ್ಲ ಮತ್ತು ಹುರಿದ ಅಕ್ಕಿ ಹಿಟ್ಟು ಹಾಕಿ ಸ್ವಲ್ಪ ನೀರನ್ನು ಮಿಶ್ರ ಮಾಡಿ ರುಬ್ಬಿ. ಈ ಮಿಶ್ರಣವು ಬೋಂಡ ಹಿಟ್ಟಿನ ಹದದಲ್ಲಿ ಇರಬೇಕು. ಬಾಳೆ ಕಾಯಿಯನ್ನು ಬಿಲ್ಲೆಗಳಾಗಿ ಹೆಚ್ಚಿ ಈ ಮಿಶ್ರಣದಲ್ಲಿ ಹಾಕಿ. ಕಾವಲಿಯನ್ನು ಬಿಸಿ ಮಾಡಿ, ಒಂದು ಚಮಚ ಎಣ್ಣೆ ಹಾಕಿ. ಅಕ್ಕಿ ಹಿಟ್ಟಿನ ಮಿಶ್ರಣದಲ್ಲಿ ಅದ್ದಿದ ಬಾಲೆಕಾಯಿಯ ಬಿಲ್ಲೆಗಳನ್ನು ಕಾವಲಿಯಲ್ಲಿ ಹಾಕಿ ಬೇಯಿಸಿ. ೨-೩ ನಿಮಿಷ ಕಳೆದ ಮೇಲೆ ಬಾಳೆ ಕಾಯಿ ಬಿಲ್ಲೆಗಳನ್ನು ಮಗುಚಿ ಹಾಕಿ ಬೇಯಿಸಬೇಕು.

LEAVE A REPLY

Please enter your comment!
Please enter your name here