ಬಾಲಕಾರ್ಮಿಕ ದಾಳಿ

0
218

ಮ0ಗಳೂರು ಪ್ರತಿನಿಧಿ ವರದಿ
ದಕ್ಷಿಣ ಕನ್ನಡ ಜಿಲ್ಲೆಯನ್ನು ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿ ಘೋಷಿಸುವ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆ ಹಾಗೂ ಕಲಂ 17ರಡಿ ನೇಮಕಗೊಂಡ ವಿವಿಧ ನಿರೀಕ್ಷರುಗಳು ನಗರದ ಹೊಟೇಲು, ಅಂಗಡಿ ವಾಣಿಜ್ಯ ಸಂಸ್ಥೆಗಳು, ಕಟ್ಟಡಗಳು, ಮನೆಗಳು, ಅಪಾರ್ಟ್ ಮೆಂಟ್ ಗಳು, ಗ್ಯಾರೇಜು ಮೊದಲಾದ ಉದ್ಯೋಗದಾತ ಸಂಸ್ಥೆಗಳಿಗೆ ದಾಳಿ ಮಾಡಿ ಬಾಲಕಾರ್ಮಿಕರ ನೇಮಕಾತಿ ಬಗ್ಗೆ ಪರಿಶೀಲಿಸುತ್ತಿದ್ದಾರೆ.
 
 
ಈ ನಿಟ್ಟಿನಲ್ಲಿ ಶುಕ್ರವಾರ ಕಿನ್ನಿಗೋಳಿ, ಕಟೀಲು, ಬಜ್ಪೆ ಹಾಗೂ ಕೊಟ್ಟಾರದಲ್ಲಿರುವ ಗ್ಯಾರೇಜು, ಹೋಟೆಲು, ಬಾರ್ & ರೆಸ್ಟೋರೆಂಟ್ ಮುಂತಾದ ಪ್ರದೇಶಗಳಿಗೆ ಬಾಲಕಾಮಿಕರ ಪತ್ತೆಗಾಗಿ ಹಠಾತ್ ದಾಳಿಯನ್ನು ನಡೆಸಲಾಯಿತು. ದಾಳಿಯಲ್ಲಿ ಕಾರ್ಮಿಕ ಇಲಾಖೆಯ ಹಿರಿಯ ಕಾರ್ಮಿಕ ನಿರೀಕ್ಷಕರಾದ ಮೇರಿ ಡಯಾಸ್, ವೇಮಣ್ಣ, ಗಣಪತಿ ಹೆಗ್ಡೆ ಹಾಗೂ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕರಾದ ಶ್ರೀನಿವಾಸ ನಾಯಕ್ ಮತ್ತು ಮಕ್ಕಳ ರಕ್ಷಣಾ ಘಟಕದಿಂದ ಶಿವಾನಂದ ಹಾಗೂ ಚೈಲ್ಡ್ ಲೈನ್ ನಿಂದ ಅಸುಂತಾ, ಪವಿತ್ರ ಪಾಲ್ಗೊಂಡಿದ್ದರು.
 
 
ಅಲ್ಲದೇ ಜಿಲ್ಲೆಯ ತಾಲೊಕು ಪ್ರದೇಶಗಳಾದ ಪುತ್ತೂರು, ಬಂಟ್ವಾಳ, ತಾಲೂಕಿನಲ್ಲಿ ಕಲಂ-17ರಲ್ಲಿ ನೇಮಕಗೊಂಡ ತಾಲೊಕು ಮಟ್ಟದ ನಿರೀಕ್ಷಕರುಗಳು ಗೇರು ಬೀಜ ಕಾರ್ಖಾನೆ ಹೋಟೆಲ್, ಗ್ಯಾರೇಜು ಮುಂತಾದ ಪ್ರದೇಶಗಳಿಗೆ ಹಠಾತ್ ದಾಳಿಯನ್ನು ನಡೆಸಿ ಸ್ಟಿಕ್ಕರ್ಗಳನ್ನು ಅಂಟಿಸಿ ಸಾರ್ವಜನಿಕರಲ್ಲಿ ವ್ಯಾಪಕ ಜಾಗೃತಿ ಮೂಡಿಸಿರುತ್ತಾರೆ.
 
ಬಾಲಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವುದು ಬಾಲಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯಡಿ ಅಪರಾಧವಾಗಿದ್ದು, ಉಲ್ಲಂಘನೆಗಾಗಿ 1 ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಹಾಗೂ ರೂ. 20,000/- ವರೆಗೆ ದಂಡ ಅಥವಾ ಎರಡಕ್ಕೂ ಒಳಗಾಗ ಬೇಕಾಗುತ್ತದೆ. ಬಾಲಕಾರ್ಮಿಕರ ನೇಮಕಾತಿ ಕಂಡು ಬಂದಲ್ಲಿ 0824-2433131, 2437479, 2435343 ಹಾಗೂ 2433132ಗಳಗೆ ಅಥವಾ ಚೈಲ್ಡ್ ಲೈನ್- 1098 ಇವರಿಗೆ ಕರೆ ಮಾಡಿ ಜಿಲ್ಲೆಯನ್ನು ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಹಕರಿಸುವಂತೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here