ಬಾಬು ಜಗಜೀವನ್ ರಾಮ್ ರವರ 109ನೇ ಜಯಂತಿ ಆಚರಣೆ

0
1264

 
ಹೊಸಂಗಡಿಯ ಕೆಪಿಸಿ ಎನರ್ಜಿ ಕ್ಲಬ್ ಸಭಾಂಗಣದಲ್ಲಿ ಬಾಬು ಜಗಜೀವನ್ ರಾಮ್ ರವರ 109ನೇ ಜಯಂತಿಯನ್ನು ಕೆಪಿಸಿ ಮತ್ತು ಕೆಪಿಸಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ನೌಕರರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಏ.5ರಂದು ಆಚರಿಸಲಾಯಿತು.
 
ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾರ್ಯನಿರ್ವಾಹಕ ನಿರ್ದೇಶಕರು(ಹೈಡಲ್) ರವರಾದ ಶ್ರೀಮತಿ ಜಿ. ರತ್ನಮ್ಮ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಬಾಬು ಜಗಜೀವನ್ರಾಮ್ ರವರು ದೇಶದಲ್ಲಿರುವ ದೀನದಲಿತರು ಅನುಭವಿಸುತ್ತಿದ್ದ ಅಸ್ಪ್ರಶ್ಯತೆಯ ವಿರುದ್ಧ ತಮ್ಮ ಶಾಲಾ ಜೀವನದಿಂದಲೇ ಹೋರಾಡುತ್ತಾ ಬಂದಿದ್ದಾರೆ ಮತ್ತು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು ಹಾಗೂ ಅವರ ಸುದೀರ್ಘ ರಾಜಕೀಯ ಜೀವನದಲ್ಲಿ ಸತತವಾಗಿ 30 ವರ್ಷಗಳ ಕಾಲ ಕೇಂದ್ರ ಸಂಪುಟ ಸಚಿವರಾಗಿ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದು, ಹಾಗೂ ಅವರು ಕೃಷಿ ಸಚಿವರಾಗಿದ್ದ ಸಂದರ್ಭದಲ್ಲಿ ದೇಶ ಬರಗಾಲ ಪರಿಸ್ಥಿತಿಯಲ್ಲಿ ಹಾದು ಹೋಗುತ್ತಿತ್ತು. ಅಂತಹ ಸಂದರ್ಭದಲ್ಲಿ ಅಮೇರಿಕಾ ದೇಶದ ಕೃಷಿ ತಜ್ಞರನ್ನು ಕರೆಸಿ ದೇಶದ ಕೃಷಿ ಕ್ಷೇತ್ರಕ್ಕೆ ವಿಶೇಷ ಪ್ರದಾನ್ಯತೆ ನೀಡಿ, ದೇಶಾದ್ಯಂತ ಹಸಿರು ಕ್ರಾಂತಿಯನ್ನು ಹುಟ್ಟಿಹಾಕಿ ದೇಶದ ಅಹಾರ ಕೊರತೆ ನೀಗಿಸುವಲ್ಲಿ ಯಶಸ್ವಿಯಾಗಿದ್ದರು ಎಂದರು. ಜಗಜೀವನ್ರಾಮ್ ರವರ ಸಜ್ಜನಿಕೆ, ಮೃದು ಸ್ವಭಾವ, ಸರಳ ಜೀವನ ಶೈಲಿಯನ್ನು ಮೆಚ್ಚಿ. ಸಮಾಜಿಕ ಚಿಂತಕ ಹಾಗೂ ಹಿರಿಯ ರಾಜಕೀಯ ಮುತ್ಸದ್ಧಿ ಜಯಪ್ರಕಾಶ್ ನಾರಾಯಣ ರವರು ಒಮ್ಮೆ ಅವರನ್ನು ಬಾಬುಜೀ ಎಂದು ಸಂಬೋದಿಸಿದ್ದರು ಅಂದಿನಿಂದ ಬಾಬು ಜಗಜೀವನ್ ರಾಮ್ ಎಂಬ ಹೆಸರಿನಿಂದ ಕರೆಯಲು ಪ್ರಾರಂಭಿಸಿದರು ಎಂದರು.
 
ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ ಅಧೀಕ್ಷಕ ಅಭಿಯಂತರರು(ವಿ)ವಾರಾಹಿ ರವರಾದ ಎನ್. ಉದಯನಾಯ್ಕ್, ಮಾತನಾಡಿ ಬಾಬು ಜಗಜೀವನ್ ರಾಮ್ ಅಸ್ಪ್ರಶ್ಯತೆ ವಿರುದ್ಧ ಮಾಡಿದ ಹೋರಾಟಗಳು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು ಸೆರೆಮನೆವಾಸ ಅನುಭವಿಸಿದ ಕುರಿತು ವಿವರಿಸಿದರು, ಸ್ವಾತಂತ್ರ್ಯ ಭಾರತದಲ್ಲಿ ಸತತವಾಗಿ ಮೂರು ದಶಕಗಳ ಕಾಲ ಸಂಪುಟ ಸಚಿವರಾಗಿ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದರು ಹಾಗೂ 1977 ರಿಂದ 1979 ರ ವರೆಗೆ ಉಪ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿ, ದೇಶದಲ್ಲಿ ಅಸ್ಪ್ರಶ್ಯತೆ ಹೋಗಲಾಡಿಸಲು ಶ್ರಮಿಸಿದರು ಎಂದರು.
 
 
ಸಮಾರಂಭದ ಮತ್ತೊರ್ವ ಮುಖ್ಯ ಅತಿಥಿಯಾದ ವ್ಯೆದ್ಯಕೀಯ ಅಧೀಕ್ಷಕರಾದ ಡಾ|| ವಿಜಯಲಕ್ಷ್ಮಿ ನಾಯಕ್ ರವರು ಸಮಾರಂಭವನ್ನುದ್ದೇಶಿಸಿ ಮಾತನಾಡುತ್ತಾ ಬಾಬು ಜಗಜೀವನ್ ರಾಮ್ ರವರು ಒಬ್ಬ ಚತುರ ರಾಜಕಾರಿಣಿಯಾಗಿದ್ದರು ಅವರು ದೇಶದ ಕೃಷಿ ಮಂತ್ರಿಯಾಗಿದ್ದಾಗ ವ್ಯವಸಾಯ ಕ್ಷೇತ್ರಕ್ಕೆ ಹೆಚ್ಚು ಆಸಕ್ತಿಯಿಂದ ಸೇವೆ ಸಲ್ಲಿಸಿ, ದೇಶದ ಆಹಾರ ಕೊರತೆಯನ್ನು ನೀಗಿಸಿದರು ಎಂದರು.
 
ಇದೇ ಸಂದರ್ಭದಲ್ಲಿ ಬಾಬು ಜಗಜೀವನ್ರಾಮ್ ಜಯಂತಿ ಸಂಬಂಧ ಆಯೋಜಿಸಲಾಗಿದ್ದ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮದಲ್ಲಿ ವಿಜೇತ ಉದ್ಯೋಗಿಗಳಿಗೆ ಬಹುಮಾನ ವಿತರಿಸಲಾಯಿತು. ಆರಂಭದಲ್ಲಿ ಕೆ. ನಾಗರಾಜ, ಮೆ.ಗ್ರೇ.ಟೈಪಿಸ್ಟ್ ರವರು ಪ್ರಾರ್ಥನೆ ಮಾಡಿದರು. ಸಾಗರ ಹೆಚ್.ಎ. ಸಹಾಯಕ(ಆಡಳಿತ) ಸ್ವಾಗತಿಸಿದರು, ಹೆಚ್.ಎಲ್. ಧರ್ಮೇಶ್, ದೈಹಿಕ ಶಿಕ್ಷಕ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here