ಬಾಬಾ ಮಂದಿರಲ್ಲಿ ಅಚ್ಚರಿ!

0
402

ಮೈಸೂರು ಪ್ರತಿನಿಧಿ ವರದಿ
ಶ್ರೀ ಶಿರಡಿ ಸಾಯಿ ಬಾಬಾ ಮಂದಿರದಲ್ಲಿ ಬಾಬಾನ ವಿಗ್ರಹದ ಮುಂದೆ ಶಿರಡಿ ಸಾಯಿ ಬಾಬಾ ಮೂರ್ತಿಯ ಆಕೃತಿಯ ಬೆಳಕೊಂದು ಗೋಚರಿಸಿದ ಘಟನೆ ಮೈಸೂರು ಜಿಲ್ಲೆಯ ಹುಣುಸೂರಿನಲ್ಲಿ ನಡೆದಿದೆ. ಈ ಆಕೃತಿ ಮಂದಿರದ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎನ್ನಲಾಗಿದೆ.
 
 
 
ಈ ಹಿನ್ನೆಲೆ ಸಾಯಿಬಾಬಾನೇ ಪ್ರತ್ಯಕ್ಷನಾಗಿದ್ದಾನೆ ಎಂಬ ಸುದ್ದಿ ಇದೀಗ ಹರಿದಾಡುತ್ತಿದೆ. ನಿನ್ನೆ ಬೆಳಗ್ಗೆ 7.40ರ ವೇಳೆ ಬೆಳಕಿನ ರೂಪದಲ್ಲಿ ಬಾಬಾ ಪ್ರತ್ಯಕ್ಷರಾಗಿದ್ದರು. ಬೆಳಕಿನ ದೃಶ್ಯ ಸಿಸಿಟಿವಿಯಲ್ಲಿ 15 ಸೆಕೆಂಡ್ ಗಳ ಕಾಲ ಸೆರೆಯಾಗಿದೆ.
 
 
 
ಸಿಸಿಟಿವಿಯಲ್ಲಿ ಈ ಸೂರ್ಯ ರಶ್ಮಿಯ ಬಾಬಾ ಆಕೃತಿಯನ್ನು ದೇಗುಲದ ಟ್ರಸ್ಟಿ ಮೊದಲು ವೀಕ್ಷಿಸಿದ್ದಾರೆ. ನನ್ನ ಮುಂದೆ ಸಿಸಿಟಿವಿಗೆ ಆಳವಡಿಸಿರುವ ಟಿವಿ ಇದ್ದು ಆ ಟಿವಿಯಲ್ಲಿ ಬೆಳಕಿನ ಆಕೃತಿಯಲ್ಲಿ ಸಾಯಿ ಬಾಬಾನ ರೂಪ ಕಾಣಿಸಿದೆ. ತಕ್ಷಣ ಸಾಯಿ ವಿಗ್ರಹದ ಮುಂದೆ ನೋಡಿದಾಗ ಆ ಬೆಳಕು ಕಾಣಿಸಲಿಲ್ಲ. ಈ ಆಕೃತಿಯ ದೃಶ್ಯ 15 ಸೆಕೆಂಡ್ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎನ್ನುತ್ತಾರೆ.
 
 
 
ಸುದ್ದಿ ತಿಳಿಯುತ್ತಿದ್ದಂತೆಯೇ ದೇಗುಲಕ್ಕೆ ಜನಸಮೂಹವೇ ಹರಿದುಬರುತ್ತಿದೆ. ಸಿಸಿಟಿವಿಯಲ್ಲಿ ದೃಶ್ಯವನ್ನು ಕಂಡು ಭಕ್ತರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಶಿರಡಿ ಸಾಯಿ ಬಾಬಾ ಬೆಳಕಿನ ರೂಪದಲ್ಲಿ ದರ್ಶನ ಕೊಟ್ಟರೇ ಎಂಬುದು ಕುತೂಹಲದ ವಿಷಯವಾಗಿದೆ.

LEAVE A REPLY

Please enter your comment!
Please enter your name here