ಬಾನುಲಿ ಗ್ರಾಮಾಯಾಣ: ಮಾಣಿಲ ಗ್ರಾಮದರ್ಶನ

0
339

ನಮ್ಮ ಪ್ರತಿನಿಧಿ ವರದಿ
ಮಂಗಳೂರು ಆಕಾಶವಾಣಿಯ ಕಲ್ಯಾಣವಾಣಿ ಜನಪರ ಯೋಜನೆಗಳ ಸರಣಿಯಲ್ಲಿ ಪ್ರತೀ ತಿಂಗಳ ನಾಲ್ಕನೇ ಬುಧವಾರ ಬೆಳಿಗ್ಗೆ 8.50 ರಿಂದ 9,30 ರವರೆಗೆ ಪ್ರಸಾರವಾಗುವ ಬಾನುಲಿ ಗ್ರಾಮಾಯಾಣದಲ್ಲಿ ಜೂ.29 ರಂದು ಬಂಟ್ವಾಳ ತಾಲೂಕಿನ ‘ಮಾಣಿಲ’ ಗ್ರಾಮದರ್ಶನ ಮೂಡಿಬರಲಿದೆ.
 
 
 
ಕುಗ್ರಾಮವೆಂದು ಗುರುತಿಸಲಾದ ಮಾಣಿಲ ಕೇರಳ ಕರ್ನಾಟಕದ ಗಡಿ ಗ್ರಾಮವಾಗಿದ್ದು ಪ್ರಸ್ತುತ ಅಭಿವೃದ್ಧಿ ಹೊಂದುತ್ತಿದ್ದು, ಮಾಣಿಲ ಶ್ರೀದಾಮ, ಕುಕ್ಕಾಜೆ ದೇವಿಕ್ಷೇತ್ರ, ಬಾಳೆಕಲ್ಲು ಬ್ರಹ್ಮ ಬೈದರ್ಕಳ ಗರಡಿ, ವಿಷ್ಣುಮೂರ್ತಿ ದೇವಸ್ಶಾನ, ಮಕ್ಕಳ ಮತ್ತು ಮಹಿಳಾ ಯಕ್ಷಗಾನ ತರಬೇತಿ ಕೇಂದ್ರ, ಹಿರಿಯ ಯಕ್ಷಗಾನ ಕಲಾವಿದ ಪಕಳಕುಂಜ ಕೃಷ್ಣನಾಯ್ಕರ ಹುಟ್ಟೂರಿನ ಕುರಿತು ವಿಶೇಷ ನುಡಿಚಿತ್ರ ಪ್ರಸಾರವಾಗಲಿದೆ.
 
 
 
ಮಾಣಿಲ ಗ್ರಾಮ ಪಂಚಾಯತ್ ನ ಅಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು, ಮಾಣಿಲ ಶ್ರೀದಾಮಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಸಾಹಿತಿ ಎಂ.ಕೆ .ಕುಕ್ಕಾಜೆ, ಬಾಳೆಕಲ್ಲು ಕೊರಗಪ್ಪ ಪೂಜಾರಿ, ಮುರುವ ಮಹಾಬಲ ಭಟ್, ರಾಮಕೃಷ್ಣ ಅಡ್ಯಂತಾಯ, ಹರೀಶ್ ಬಳಂತಿಮೊಗರು, ಶ್ರೀಕೃಷ್ಣ ಕುಕ್ಕಾಜೆ ಮುಂತಾದವರು ಗ್ರಾಮದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಬೆಳವಣಿಗೆಯ ಬಗ್ಗೆ ಮಾಹಿತಿ ನೀಡಿದ್ಧಾರೆ.
 
 
ಈ ನುಡಿ ಚಿತ್ರವನ್ನು ಕಾರ್ಯಕ್ರಮ ನಿರ್ವಾಹಕ ಡಾ.ಸದಾನಂದ ಪೆರ್ಲ ಪ್ರಸ್ತುತ ಪಡಿಸಲಿದ್ದಾರೆ ಎಂದು ಕಾರ್ಯಕ್ರಮ ಮುಖ್ಯಸ್ಶರಾದ ಡಾ.ವಸಂತ ಕುಮಾರ್ ಪೆರ್ಲ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here