ನಮ್ಮ ಪ್ರತಿನಿಧಿ ವರದಿ
ಮಂಗಳೂರು ಆಕಾಶವಾಣಿಯ ಕಲ್ಯಾಣವಾಣಿ ಜನಪರ ಯೋಜನೆಗಳ ಸರಣಿಯ ಕಾರ್ಯಕ್ರಮದಲ್ಲಿ ಜುಲೈ 27ರಂದು ಬೆಳಿಗ್ಗೆ 8.50 ರಿಂದ 9.30 ರವರೆಗೆ ಬಾನುಲಿ ಗ್ರಾಮಾಯಣದ ಕಾಸರಗೋಡು ಜಿಲ್ಲೆಯ ಮಧೂರು ಗ್ರಾಮದ ವಿಶೇಷ ನುಡಿ ಚಿತ್ರ ಪ್ರಸಾರವಾಗಲಿದೆ.
ಮಧೂರು ಗ್ರಾಮ ಪಂಚಾಯತ್ ಕೇರಳ ರಾಜ್ಯದಲ್ಲಿ ಮಾದರಿ ಗ್ರಾಮ ಪಂಚಾಯತ್ ಎಂಬ ಹೆಗ್ಗಳಿಕೆ ಪಾತ್ರವಾಗಿ ಐಎಸ್ಒ ಮಾನ್ಯತೆ ಪಡೆದ ಗ್ರಾಮವಾಗಿದೆ. ಪಂಚಾಯತ್ ಅಭಿವೃದ್ಧಿ ಕಾರ್ಯದ ಬಗ್ಗೆ ಅಧ್ಯಕ್ಷರಾದ ಮಾಲತಿ ಸುರೇಶ್, ಉಪಾಧ್ಯಕ್ಷರಾದ ದಿವಾಕರ್ ಆಚಾರ್ಯ ಯಕ್ಷಗಾನ ರಂಗದ ಬಗ್ಗೆ ಮಧೂರು ವೆಂಕಟಕೃಷ್ಣ , ರಾಮಕೃಷ್ಣ ಮಯ್ಯ, ಅಸ್ತ್ರ ಮನೆತನದ ಬಗ್ಗೆ ಉಳಿಯ ವಿಷ್ಣು ಆಸ್ತ್ರ, ಕೂಡ್ಲು ಮನೆತನದ ಬಗ್ಗೆ ವಿಜಯಲಕ್ಮ್ಷಿ ಶ್ಯಾನುಭಾಗ ಮತ್ತು ಡಾ.ಕೆ.ಕೆ.ಶ್ಯಾನುಭಾಗ, ಸಾಂಸ್ಕೃತಿಕ ರಂಗದ ಮತ್ತು ಇತಿಹಾಸದ ಬಗ್ಗೆ ರಾಧಾಕೃಷ್ಣ ಉಳಿಯತ್ತಡ್ಕ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಮೇಶ್ ಸಾಲ್ಯಾನ್, ಕನ್ನಡ ಹೋರಾಟದ ಬಗ್ಗೆ ಜಗದೀಶ್ ಕೂಡ್ಲು ಕೃಷಿಕ್ಷೇತ್ರದ ಬಗ್ಗೆ ರವೀಂದ್ರ ರೈ ಎಸ್.ಸಂತೋಷಕುಮಾರ್ ಬದಿಮನೆ ಶಿಕ್ಷಣದ ಬಗ್ಗೆ ರಾಘವನ್ ಮಾಸ್ತರ್, ಕುಟುಂಬ ಶ್ರೀ ಬಗ್ಗೆ ಪಂಚಾಯತ್ ಸದಸ್ಯ ಸುಮಿತ್ತಾ ಮಯ್ಯ, ಮಾಯಿಪ್ಪಾಡಿ ಅರಮನೆ ಇತಿಹಾಸದ ಬಗ್ಗೆ ರಘುರಾಮ ವರ್ಮ ರಾಜ ಹಾಗೂ ಕಂಬಳ ಇತಿಹಾಸದ ಕುರಿತು ವಿಶ್ವನಾಥ ರೈ ಮಾಯಿಪ್ಪಾಡಿ ಮತ್ತಿತರರು ಗ್ರಾಮದ ಸಾಮಾಜಿಕ ಸಾಂಸ್ಕೃತಿಕ, ಐತಿಹಾಸಿಕ ಮಹತ್ವವನ್ನು ಸಂದರ್ಶನದಲ್ಲಿ ತಿಳಿಸಿದ್ದಾರೆ.
ಮಂಗಳೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕರಾದ ಡಾ.ಸದಾನಂದ ಪೆರ್ಲ ಕಾರ್ಯಕ್ರಮ ಪ್ರಸ್ತುತ ಪಡಿಸಿದ್ದಾರೆ ಎಂದು ಕಾರ್ಯಕ್ರಮ ಮುಖ್ಯಸ್ಥರಾದ ಡಾ. ವಸಂತಕುಮಾರ್ ಪೆರ್ಲ ತಿಳಿಸಿದ್ದಾರೆ.