ಬಾನುಲಿ ಗ್ರಾಮಾಯಣ ಕೋಟತಟ್ಟು ಗ್ರಾಮದರ್ಶನ

0
425

 
ಮಂಗಳೂರು ಪ್ರತಿನಿಧಿ ವರದಿ
ಮಂಗಳೂರು ಆಕಾಶವಾಣಿಯ ಕಲ್ಯಾಣವಾಣಿ ಜನಪರ ಯೋಜನೆಗಳ ಸರಣಿಯಲ್ಲಿ ಪ್ರತೀ ತಿಂಗಳ ನಾಲ್ಕನೇ ಬುಧವಾರ ಬೆಳಗ್ಗೆ 8.50ರಿಂದ 9.30ರ ವರೆಗೆ ಪ್ರಸಾರವಾಗುವ ಬಾನುಲಿ ಗ್ರಾಮಾಯಣ ದಲ್ಲಿ ಮೇ 25ರಂದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟತಟ್ಟು ಗ್ರಾಮದರ್ಶನ ಮೂಡಿಬರಲಿದೆ.
 
 
akashavani-kota
 
ಕೋಟತಟ್ಟು ಥೀಂಪಾರ್ಕ್, ಡಾ. ಶಿವರಾಮ ಕಾರಂತ ಸಂಶೋಧನಾ ಮತ್ತು ಅದ್ಯಯನ ಸಂಸ್ಥೆ ಸೇರಿದಂತೆ ಕೋಟದ ಪರಿಸರದ ಸಾಮಾಜಿಕ, ಸಾಂಸ್ಕೃತಿಕ ಐತಿಹಾಸಿಕ ಹಿನ್ನಲೆಯೊಂದಿಗೆ ವಿಶೇಷ ನುಡಿಚಿತ್ರ ಪ್ರಸಾರವಾಗಲಿದೆ.
 
 
 
ಕೋಟತಟ್ಟು ಗ್ರಾಮ ಪಂಚಾಯತ್ನ ಅಭಿವೃದ್ಧಿಯ ಕುರಿತಾಗಿ ಎಂ.ಎಲ್.ಸಿ. ಕೋಟ ಶ್ರೀನಿವಾಸ ಪೂಜಾರಿ, ಅಧ್ಯಕ್ಷರಾದ ಪ್ರಮೋದ್ ಹಂದೆ, ಪಿಡಿಒ ಪಾರ್ವತಿ, ಯಕ್ಷಗಾನ ಕೇಂದ್ರದ ಬಗ್ಗೆ ಚಿತ್ರಪಾಡಿ ಕೃಷ್ಣ ಮೂರ್ತಿ ಉರಾಳ, ಭಾಷಾ ವೈವಿದ್ಯತೆ ಬಗ್ಗೆ ನರೇಂದ್ರ ಕುಮಾರ್ ಕೋಟ, ಜಾನಪದ ಹಾಡುಗಾರ್ತಿ ಕೆ.ಬಿ. ಶಾಂತ ಐತಾಳ್, ವಿಠಲ ವಿಗಾಂವಂಕರ್, ಮಕ್ಕಳ ಮೇಳದ ಶ್ರೀಧರ ಹಂದೆ, ಕಾರಂತ ಮ್ಯೂಸಿಯಂನ ಮಾಲಿನಿ ಮಲ್ಯ ಸೇರಿದಂತೆ ಅನೇಕರು ತಮ್ಮ ಅಭಿಪ್ರಾಯಗಳನ್ನು ದಾಖಲಿಸಿದ್ದಾರೆ.
 
 
 
ಈ ಕಾರ್ಯಕ್ರಮವನ್ನು ಕಾರ್ಯಕ್ರಮ ನಿರ್ವಾಹಕರಾದ ಡಾ. ಸದಾನಂದ ಪೆರ್ಲ ಪ್ರಸ್ತುತಪಡಿಸಲಿದ್ದಾರೆ ಎಂದು ಕಾರ್ಯಕ್ರಮ ಮುಖ್ಯಸ್ಥರಾದ ಡಾ. ವಸಂತ ಕುಮಾರ್ ಪೆರ್ಲ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here