ಬಾಗ್ದಾದ್ ಬಾಂಬ್ ದಾಳಿ: ಶಿಯಾ ಟಾರ್ಗೆಟ್

0
186

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ನಿನ್ನೆ ಇರಾಕ್ ನ ರಾಜಧಾನಿ ಬಾಗ್ದಾದ್ ನ ನಾಲ್ಕು ಕಡೆಗಳಲ್ಲಿ ಬಾಂಬ್ ಸ್ಫೋಟಗೊಂಡಿದೆ. ಘಟನೆಯಲ್ಲಿ 50ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
 
 
ಮೊದಲು ಜನನಿಬಿಡ ಪ್ರದೇಶವಾದ ಅಲ್-ಶಾಬ್ ಜಿಲ್ಲೆಯ ಉತ್ತರಭಾಗದ ಮಾರುಕಟ್ಟೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಸ್ಫೋಟದ ಬಳಿಕ ಸಂತ್ರಸ್ತರಿಗೆ ಸಹಾಯ ಮಾಡಲು ಜನ ಸೇರುತ್ತಿದ್ದಂತೆ ಮತ್ತೋರ್ವ ಆತ್ಮಾಹುತಿ ದಾಳಿಕೋರನೊಬ್ಬ ಬಾಂಬ್ ಸ್ಫೋಟಿಸಿದ್ದಾನೆ.
 
 
ಬಾಂಬ್ ಸ್ಫೋಟದ ಪರಿಣಾಮ 50ಕ್ಕೂ ಹಚ್ಚು ಮಂದಿ ಸಾವನ್ನಪ್ಪಿದ್ದು, 70ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ.
 
 
ದಕ್ಷಿಣ ಭಾಗದಲ್ಲೂ ಕಾರು ಬಾಂಬ್ ಸ್ಫೋಟವಾಗಿದ್ದು, ಘಟನೆಯಲ್ಲಿ 20 ಮಂದಿ ಸಾವನ್ನಪ್ಪಿದ್ದು, ಹಲವರಿಗೆ ಗಾಯಗಳಾಗಿವೆ.
 
 
ಸ್ಪೋಟವಾದ ಪ್ರದೇಶದಲ್ಲಿ ಶಿಯಾ ಮುಸ್ಲಿಂ ಪ್ರಾಬಲ್ಯ ಇರುವ ಪ್ರದೇಶವಾಗಿದೆ. ದಾಳಿಯ ಹೊಣೆಯನ್ನು ಐಸಿಸ್ ಉಗ್ರರು ಹೊತ್ತಿದ್ದಾರೆ.

LEAVE A REPLY

Please enter your comment!
Please enter your name here