ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಇರಾಕ್ನ ಮೊಸುಲ್ ನಗರವನ್ನು ಐಎಸ್ ಉಗ್ರರಿಂದ ವಿಮೋಚನೆಗೊಳಿಸಲು ಸೇನಾಪಡೆಗಳು ಬೃಹತ್ ಸೇನಾ ಕಾರ್ಯಾಚರಣೆ ನಡೆಸಿರುವಾಗಲೇ, ಇತ್ತ ರಾಜಧಾನಿ ಬಾಗ್ದಾದ್ನ ಆರ್ಮಿ ಚೆಕ್ಪಾಯಿಂಟ್ ಬಳಿ ನಡೆದ ಆತ್ಮಾಹುತಿ ಕಾರ್ ಬಾರ್ ದಾಳಿಯಲ್ಲಿ ನಾಲ್ವರು ಯೋಧರೂ ಸೇರಿದಂತೆ ಕನಿಷ್ಠ 10 ಮಂದಿ ಬಲಿಯಾಗಿದ್ದಾರೆ.
ಸ್ಪೋಟದಲ್ಲಿ 17ಕ್ಕೂ ಹೆಚ್ಚು ಸೈನಿಕರು ಗಾಯಗೊಂಡಿದ್ದಾರೆ. ದಕ್ಷಿಣ ಬಾಗ್ದಾದ್ನ ಯೂಸುಫಿಯಾದ ಸೇನೆ ತಪಾಸಣೆ ಕೇಂದ್ರವನ್ನು ಗುರಿಯಾಗಿಟ್ಟುಕೊಂಡು ಉಗ್ರರು ಆತ್ಮಾಹತ್ಯಾ ಕಾರ್ ಬಾಂಬ್ ಸ್ಫೋಟಿಸಿದ್ದಾರೆ ಎನ್ನಲಾಗಿದೆ.