ಬಾಂಬ್ ಸ್ಫೋಟ

0
304

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಬಾಂಗ್ಲಾ ದೇಶಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಬಾಂಗ್ಲಾದೇಶದಲ್ಲಿ ಬಾಂಬ್ ಸ್ಫೋಟವಾಗಿದೆ. ಶೋಲ್ಕಿಯಾದ ಈದ್ಗಾ ಮೈದಾನದಲ್ಲಿ ನಡೆಯುತ್ತಿದ್ದ ಮುಸ್ಲಿಂ ಬಾಂಧವರ ಸಾಮೂಹಿಕ ರಂಜಾನ್ ಪ್ರಾರ್ಥನೆ ವೇಳೆ ಭಯೋತ್ಪಾದಕರು ಬಾಂಬ್ ದಾಳಿ ನಡೆಸಿದ್ದಾರೆ.
 
 
ಘಟನೆಯಲ್ಲೇ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಇಬ್ಬರು ಪೊಲೀಸ್ ಪೇದೆ ಮತ್ತು ಇಬ್ಬರು ದಾಳಿಕೋರರು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.  12 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಒಂದೇ ವಾರದ ಅಂತರದಲ್ಲಿ ಉಗ್ರರು ಮತ್ತೊಮ್ಮೆ ಬಾಂಬ್ ದಾಳಿ ನಡೆಸಿದ್ದಾರೆ.
 
 
ಸುಮಾರು 6 ರಿಂದ 7 ಉಗ್ರರಿದ್ದ ತಂಡ ದಾಳಿ ನಡೆಸಿದೆ. ಉಗ್ರರು ಬಂದೂಕುಗಳು ಮತ್ತು ಹರಿತವಾದ ಆಯುಧವನ್ನು ಹೊಂದಿದ್ದರು. ಉಗ್ರರು ಸಮೀಪದ ಮನೆಯೊಂದರಲ್ಲಿ ಅಡಗಿರುವ ಶಂಕೆಯಿದ್ದು, ಮನೆಯನ್ನು ಭದ್ರತಾಪಡೆಗಳು ಸುತ್ತುವರಿದಿದ್ದರು. ಉಗ್ರರು ಮತ್ತು ಭದ್ರತಾಪಡೆ ಮಧ್ಯೆ ಭಾರೀ ಗುಂಡಿನ ಚಕಾಮಕಿ ನಡೆದಿದೆ.
 
 
ಭಯೋತ್ಪಾದಕರು ಕಳೆದ ಶುಕ್ರವಾರವಷ್ಟೇ ಮುಂಬೈ ಮಾದರಿಯಲ್ಲಿ ಢಾಕಾದ ಹೋಲಿ ಆರ್ಟಿಸನ್ ರೆಸ್ಟೋರೆಂಟ್ ಮೇಲೆ ನಡೆದ ಉಗ್ರ ದಾಳಿಯಲ್ಲಿ ಓರ್ವ ಭಾರತೀಯ ಯುವತಿ ಸೇರಿದಂತೆ 22 ಮಂದಿ ಸಾವನ್ನಪ್ಪಿದ್ದರು.

LEAVE A REPLY

Please enter your comment!
Please enter your name here