ಬಾಂಬ್ ಸ್ಪೋಟ: ಓರ್ವ ಬಲಿ

0
285

 
ರಾಷ್ಟ್ರೀಯ ಪ್ರತಿನಿಧಿ ವರದಿ
ಮತದಾನದ ವೇಳೆ ಬಾಂಬ್ ಸ್ಫೋಟವಾದ ಪರಿಣಾಮ ಓರ್ವ ದುರ್ಮರಣ ಹೊಂದಿದ ಘಟನೆ ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದೆ.
 
 
ಇಲ್ಲಿನ ಮುರ್ಶಿದಾಬಾದ್ ಜಿಲ್ಲೆಯ ಡೋಮ್ಕಲ್ ನಲ್ಲಿ ಮತದಾನ ವೇಳೆ ಬಾಂಬ್ ಸ್ಫೋಟವಾದ ಹಿನ್ನೆಲೆಯಲ್ಲಿ ಸಿಪಿಐ(ಎಂ) ಕಾರ್ಯಕರ್ತ ಸಾವನ್ನಪ್ಪಿದ್ದಾನೆ. ಟಿಎಂಸಿ, ಸಿಪಿಐ(ಎಂ) ಕಾರ್ತಕರ್ತರ ನಡುವೆ ಘರ್ಷಣೆ ಸಮಭವಿಸಿದೆ. ಈ ವೇಳೆ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
 
 
ಪಶ್ಚಿಮ ಬಂಗಾಳದಲ್ಲಿ ಇಂದು ವಿಧಾನಸಭಾ ಚುನಾವಣೆ ಆರಂಭವಾಗಿದೆ. ಪ.ಬಂಗಾಳದಲ್ಲಿ ಮೂರನೇ ಹಂತದ ಮತದಾನ ನಡೆಯುತ್ತಿದ್ದು. ಒಟ್ಟು 62 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. 34 ಮಹಿಳೆಯರು ಸೇರಿ 418 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಉತ್ತರ ಕೋಲ್ಕತ್ತಾ, ಬರ್ದಬಾನ್, ಮುರ್ಶಿದಾಬಾದ್, ನದಿಯಾ ಸೇರಿ 62 ಕ್ಷೇತ್ರಗಳಲ್ಲಿ ಮತದಾನ ಬೆಳಗಿನಿಂದಲೇ ಆರಂಭವಾಗಿದೆ.

LEAVE A REPLY

Please enter your comment!
Please enter your name here