ಬಾಂಗ್ಲಾದಲ್ಲಿ ಭಯೋತ್ಪಾದಕ ದಾಳಿ ಹತ್ತಿಕ್ಕಲು ಭಾರತ ಸಹಕರಿಸಲಿದೆ

0
302

ವರದಿ: ಲೇಖಾ
ಭಯೋತ್ಪಾದಕ ದಾಳಿಗಳನ್ನು ಹತ್ತಿಕ್ಕಲು ಭಾರತ ಸಹಕರಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾ ಪ್ರಧಾನಿ ಶೇಖ್ ಹಸಿನಾ ಅವರಿಗೆ ಭರವಸೆ ನೀಡಿದ್ದಾರೆ.
 
 
ಗಡಿಯಲ್ಲಿನ ಚೆಕ್ ಪೋಸ್ಟ್ ಉದ್ಘಾಟನ ಕಾರ್ಯಕ್ರಮದ ಅಂಗವಾಗಿ ಉಭಯ ಮುಂಖಂಡರು ವಿಡಿಯೋ ಕಾನ್ಪರೆನ್ಸ್ ಮೂಲಕ ಪಾಲ್ಗೊಂಡರು. ನಮ್ಮ ನಡುವಿನ ಒಪ್ಪಂದ ಕೇವಲ ದ್ವೀಪಕ್ಷಿಯ ವ್ಯಾಪಾರ ವೃದ್ಧಿಗೆ ಸೀಮಿತವಾಗಿರದೆ ಭಯೋತ್ಪಾದನೆ ನಿಗ್ರಹ, ಆರ್ಥಿಕ ಅಭಿವೃದ್ಧಿಗೂ ಸಹಕಾರಿಯಾಗಬೇಕೆಂದು ಮೋದಿ ತಿಳಿಸಿದರು. ಇದಕ್ಕೆ ಬಾಂಗ್ಲಾ ಪ್ರಧಾನಿ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ.
 
 
ಮುಂದಿನ ದಿನಗಳಲ್ಲೀ ಭಾರತ ಹಾಗೂ ಬಾಂಗ್ಲಾ ಗಡಿಯಲ್ಲಿ ಇದೇ ರೀತಿ ಎಂಟು ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗುವುದು. ಭಾರತ ಹಾಗೂ ಬಾಂಗ್ಲಾದೇಶದ ಪಾಲಿಗೆ ಪೆಟ್ರೊಪೊಲ್ ಅತ್ಯಂತ ಮಹತ್ವದ ಸ್ಥಳವಾಗಿದೆ. ಸುಮಾರು 50ರಷ್ಟು ವ್ಯಾಪಾರ-ವ್ಯವಹಾರಗಳು ಈ ಭಾಗದಲ್ಲೇ ನಡೆಯುತ್ತವೆ ಎಂದು ಮೋದಿ ಹೇಳಿದರು.

LEAVE A REPLY

Please enter your comment!
Please enter your name here