ಪ್ರಮುಖ ಸುದ್ದಿರಾಜ್ಯವಾರ್ತೆ

ಬಹುಸಂಖ್ಯಾತರ ಭಾವನೆಗಳನ್ನು ಗೌರವಿಸಿ

ಬೆಂಗಳೂರು ಪ್ರತಿನಿಧಿ ವರದಿ
ಗೋಚಾತುರ್ಮಾಸ್ಯದಲ್ಲಿ ರಾಘವೇಶ್ವರಶ್ರೀ ಗೋಸಂದೇಶ
ನಾವೆಲ್ಲ ಯಾವುದನ್ನು ಪೂಜೆ ಮಾಡುತ್ತೇವೊ, ಸಾಧ್ಯವಾದರೆ ನೀವೂ ಪೂಜೆ ಮಾಡಿ, ಆದರೆ ಕೊಲ್ಲುವುದಕ್ಕೆ ಹೋಗಬೇಡಿ. ಇನ್ನೊಬ್ಬರ ಭಾವನೆಗೆ ಧಕ್ಕೆ ತರುವ ಕೆಲಸ ಮಾಡಬೇಡಿ ಎಂದು ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಶ್ರೀಗಳು ಹೇಳಿದರು.
 
mata_chaturmasay52
 
ಇಲ್ಲಿನ ಗಿರಿನಗರದ ಶ್ರೀರಾಮಚಂದ್ರಾಪುರಮಠದ ಶಾಖಾ ಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶಸಭೆಯಲ್ಲಿ ಮಾತನಾಡಿ, ಗೋವು ಕೋಟ್ಯಂತರ ಜನರ ತಾಯಿ, ದೇವರು, ಶೃದ್ಧಾ ಕೇಂದ್ರ. ಗೋವನ್ನು ದೇವರೆಂದು ಭಾವಿಸುವ ಜನರ ಭಾವನೆಗಳ ಮೇಲೆ ಪ್ರಹಾರ ಮಾಡಬೇಡಿ. ಗೋವಿನ ಕುರಿತಾದ ಪ್ರೀತಿ, ನಂಬಿಕೆ, ಭಾವನೆಯನ್ನು ಗೌರವಿಸಿ. ಅಲ್ಪಸಂಖ್ಯಾತರಿಗೆ ಸಹಾಯ ಮಾಡಿ. ಆದರೆ ಬಹುಸಂಖ್ಯಾತರ ಭಾವನೆಗಳನ್ನಾದರೂ ಗೌರವಿಸಿ ಎಂದು ನುಡಿದರು.
 
mata_chaturmasay5
 
 
ಗೋಮಾತೆ ಮತ್ತು ಭೂಮಾತೆಯನ್ನು ಬೇರ್ಪಡಿಸಬಾರದು. ಭೂಮಿಯಿಂದ ಗೋವಿಗೆ ಹುಲ್ಲು – ನೀರು, ಗೋವಿನಿಂದ ಭೂಮಿಗೆ ಗೋಮಯ, ಗೋಮೂತ್ರ ಸಿಗುತ್ತದೆ. ಇವೆರಡರಿಂದ ನಾವು ಭೂಮಿಯಲ್ಲಿ ಚಿನ್ನ ಬೆಳೆಯುತ್ತೇವೆ. ಗೋವಿನಿಂದ ಅಮೃತ ಪಡೆಯುತ್ತೇವೆ ಎಂದು ನುಡಿದರು.
 
 
 
ನೊಣವಿನಕೆರೆ ಶ್ರೀಕಾಡಸಿದ್ಧೇಶ್ವರಮಠದ ಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳು, ಗೋ ಮಾತೆಯ ಕಷ್ಟಗಳನ್ನು ಹಂಚಿಕೊಂಡವರು ಪರಮಪೂಜ್ಯರು. ಹಲವು ರೀತಿಯಲ್ಲಿ ಗೋವುಗಳು ಬದುಕಿಗೆ ಶಕ್ತಿಯನ್ನು ತುಂಬುತ್ತದೆ ಎಂಬುದನ್ನು ತೋರಿಸಿಕೊಡಲಿಕ್ಕಾಗಿ ಪರಮಪೂಜ್ಯರು ಗೋ ಚಾತುರ್ಮಾಸ್ಯವನ್ನು ಆಚರಿಸುತ್ತಿದ್ದಾರೆ ಎಂಬುದು ನಮ್ಮೆಲ್ಲರ ಪುಣ್ಯ. ಗೋ ಮಾತೆ ಪ್ರತ್ಯಕ್ಷ ದೇವರು. ಗೋ ಸೇವೆ ಮಾಡಿದರೆ ಪಾಪಕರ್ಮಗಳು ನಾಶವಾಗಿ ಮುಕ್ತಿ ಸಿಗುತ್ತದೆ ಎಂದರು.
 
 
 
ಗವ್ಯಾಧಾರಿತ ಕೃಷಿ ಮಾಡಿ ಕೇವಲ ನಾಲ್ಕೂವರೆ ಎಕರೆ ಪ್ರದೇಶದಲ್ಲಿ ೫೦೦ ಟನ್ ದೊಣ್ಣೆಮೆಣಸು ಬೆಳೆದ ಮಹಾರಾಷ್ಟ್ರದ ಅಶೋಕ್ ಇಂಗವಲೆಯವರಿಗೆ ಗೋಸೇವಾ ಪುರಸ್ಕಾರವನ್ನು ನೀಡಲಾಯಿತು.
 
 
 
ಶ್ರೀಭಾರತೀಪ್ರಕಾಶನ ಹೊರತಂದ ಸಾಧನಾಪಂಚಕ ಪ್ರವಚನಮಾಲಿಕೆಯ ವಿ.ಸಿ.ಡಿಯನ್ನು ಕರಿವೃಷಭದೇಶಿಕೇಂದ್ರ ಸ್ವಾಮೀಜಿ ಹಾಗೂ ಎಂ. ಜಿ. ಸತ್ಯನಾರಾಯಣ ಭಟ್, ಮಂಕಳಲೆ ಬರೆದ ಜೇನು ಪ್ರಪಂಚ ಪುಸ್ತಕವನ್ನು ರಾಘವೇಶ್ವರಶ್ರೀಗಳು ಲೋಕಾರ್ಪಣೆ ಮಾಡಿದರು. ಸಭಾಕಾರ್ಯಕ್ರಮದ ಅನಂತರ ಗರ್ತಿಕೆರೆ ರಾಘಣ್ಣ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
 
 
ವಿಧಾನ ಪರಿಷತ್ ಸದಸ್ಯ ಎಂ. ಡಿ. ಲಕ್ಷ್ಮೀನಾರಾಯಣ, ಕರ್ನಾಟಕ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕ ಜಯರಾಮ ಭಟ್, ಮುಖ್ಯ ಪ್ರಧಾನ ವ್ಯವಸ್ಥಾಪಕ ಮಹಾಬಲೇಶ್ವರ ಭಟ್, ಹಾಗೂ ಇತರ ಅಧಿಕಾರಿಗಳು ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
 
 
ಕೆಳದಿ, ಕ್ಯಾಸನೂರು, ಇಕ್ಕೇರಿ, ಉಳವಿ ವಲಯದವರು ಸರ್ವಸೇವೆಯನ್ನು ನೆರವೇರಿಸಿದರು. ಶ್ರೀಮಠದ ಪದಾಧಿಕಾರಿಗಳು, ಚಾತುರ್ಮಾಸ್ಯ ಸಮಿತಿಯ ಸದಸ್ಯರು, ವಿವಿಧ ಭಾಗಗಳ ಶಿಷ್ಯ ಭಕ್ತರು ಉಪಸ್ಥಿತರಿದ್ದರು. ಕಾರ್ತಿಕ ಭಟ್ ನಿರೂಪಿಸಿದರು.
 
 
ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.
 
 
 
“ಗೋವು ಕೋಟ್ಯಂತರ ಜನರ ತಾಯಿ, ದೇವರು, ಶೃದ್ಧಾ ಕೇಂದ್ರ. ಗೋವನ್ನು ದೇವರೆಂದು ಭಾವಿಸುವ ಜನರ ಭಾವನೆಗಳ ಮೇಲೆ ಪ್ರಹಾರ ಮಾಡಬೇಡಿ. ಗೋವಿನ ಕುರಿತಾದ ಪ್ರೀತಿ, ನಂಬಿಕೆ, ಭಾವನೆಯನ್ನು ಗೌರವಿಸಿ. ಅಲ್ಪಸಂಖ್ಯಾತರಿಗೆ ಸಹಾಯ ಮಾಡಿ. ಆದರೆ ಬಹುಸಂಖ್ಯಾತರ ಭಾವನೆಗಳನ್ನಾದರೂ ಗೌರವಿಸಿ”.
-ಶ್ರೀರಾಘವೇಶ್ವರಶ್ರೀಗಳು, ಶ್ರೀರಾಮಚಂದ್ರಾಪುರ
“ಗೋ ಮಾತೆ ಪ್ರತ್ಯಕ್ಷ ದೇವರು. ಗೋ ಸೇವೆ ಮಾಡಿದರೆ ಪಾಪಕರ್ಮಗಳು ನಾಶವಾಗಿ ಮುಕ್ತಿ ಸಿಗುತ್ತದೆ”.
-ನೊಣವಿನಕೆರೆ ಶ್ರೀಕಾಡಸಿದ್ಧೇಶ್ವರಮಠದ ಕರಿವೃಷಭದೇಶಿಕೇಂದ್ರ ಶ್ರೀಗಳು
· ಮಹಾರಾಷ್ಟ್ರದ ಅಶೋಕ್ ಇಂಗವಲೆಯವರಿಗೆ ಗೋಸೇವಾ ಪುರಸ್ಕಾರ
· ಜೇನು ಪ್ರಪಂಚ ಪುಸ್ತಕ ಲೋಕಾರ್ಪಣೆ
· ಗರ್ತಿಕೆರೆ ರಾಘಣ್ಣ ಹಾಗೂ ಸಂಗಡಿಗರಿಂದ ಸಂಗೀತ
 
 
ಇಂದಿನ ಕಾರ್ಯಕ್ರಮ (04.08.2016):
ಇಂದಿನ ಕಾರ್ಯಕ್ರಮ (05.08.2016):
ಬೆಳಗ್ಗೆ 7.00 ಕಾಮಧೇನು ಹವನ
ಬೆಳಗ್ಗೆ 9.00 : ಕುಂಕುಮಾರ್ಚನೆ
ಬೆಳಗ್ಗೆ 10.00 : ಶ್ರೀಕರಾರ್ಚಿತದೇವತಾಪೂಜೆ
ಬೆಳಗ್ಗೆ 11.30 : ಆದಿತ್ಯಹೃದಯ ಪಠಣ
ಅಪರಾಹ್ನ 3.30 :
ಗೋಸಂದೇಶ : ಗೋವುಗಳ ಆರೈಕೆ – ಪುರುಷೋತ್ತಮ ಸಾಗರ
ಲೋಕಾರ್ಪಣೆ : ಯಕ್ಷರಂಜಿನಿ ಯಕ್ಷಗಾನ ಪ್ರಸಂಗ ಪುಸ್ತಕ
ಸಾಧನಾಪಂಚಕ ಪ್ರವಚನಮಾಲಿಕೆ – ದೃಶ್ಯಮುದ್ರಿಕೆ
ಗೋಸೇವಾಪುರಸ್ಕಾರ : ಭಾಜನರು – ಪುರುಷೋತ್ತಮ ಸಾಗರ
ಸಂತ ಸಂದೇಶ : ಪರಮಪೂಜ್ಯ ಶ್ರೀ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿಗಳು, ಬೇಬಿಮಠ,
ಚಂದ್ರವನ ಆಶ್ರಮ, ಪಶ್ಚಿಮವಾಹಿನಿ, ಶ್ರೀರಂಗಪಟ್ಟಣ.
ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರಿಂದ ಚಾತುರ್ಮಾಸ್ಯ ಸಂದೇಶ
ಸಂಜೆ: 5.00 : ಕಲಾರಾಮ
ಸೂರ್ಯಾಸ್ತ ಸಮಯಕ್ಕೆ ಶ್ರೀಕರಾರ್ಚಿತದೇವತಾಪೂಜೆ
ರಾತ್ರಿ 8.00 : ಶ್ರೀಸಂಸ್ಥಾನದವರಿಂದ ‘ಸಾಧನಾಪಂಚಕ’ ಪ್ರವಚನ

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here