ಬಸ್ ಮೇಲೆ ಉರುಳಿದ ಮರ

0
286

ಬೆಂಗಳೂರು ಪ್ರತಿನಿಧಿ ವರದಿ
ಐರಾವತ ಬಸ್ ಮೇಲೆ ಮರ ಉರುಳಿದ ಘಟನೆ ಬೆಂಗಳೂರಿನ ಮಲ್ಲೇಶ್ವಂನ ಮಾರ್ಗೋಸಾ ರಸ್ತೆಯಲ್ಲಿ ನಡೆದಿದೆ. ಇಂದು ಬೆಳಗ್ಗೆ ಬಸ್ ಮೇಲೆ ಮರ ಉರುಳಿದೆ. ಬಸ್ ನಲ್ಲಿದ್ದ 26 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
 
 
ಬಸ್ ಪಕ್ಕದಲ್ಲಿದ್ದ ಆಟೋ, ಜೀಪ್ ಮೇಲೂ ಮರ ಬಿದ್ದಿದೆ.  KA-56 F 1628 ನಂಬರ್ ನ  ಐರಾವತ ಬಸ್ ಶಿರಡಿಯಿಂದ ಬೆಂಗಳೂರಿಗೆ ಬರುತ್ತಿತ್ತು. ಅದೃಷ್ಟವಶಾತ್ ಯಾರಿಗೂ ಯಾವುದೇ ಅಪಾಯವಾಗಿಲ್ಲ. ಬಿಬಿಎಂಪಿ ಸಿಬ್ಬಂದಿ ಬೃಹತ್ ಮರವನ್ನು ತೆರವುಗೊಳಿಸಿದ್ದಾರೆ. ಮರ ಉರುಳಿ ಬಿದ್ದ ಪರಿಣಾಮ ಭಾರೀ ಟ್ರಾಫಿಕ್ ಜಾಮ್ ಆಗಿದೆ. ಮಲ್ಲೇಶ್ವರಂ ವೃತ್ತದೆಡೆಗೆ ಸಂಚರಿಸುವ ಸವಾರರು ಪರದಾಟ ನಡೆಸಿದ್ದಾರೆ. ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ.

LEAVE A REPLY

Please enter your comment!
Please enter your name here