ಬಸ್ ಡಿಕ್ಕಿ: 7 ವಿದ್ಯಾರ್ಥಿಗಳು ಸಾವು

0
172

 
ಉಡುಪಿ ಪ್ರತಿನಿಧಿ ವರದಿ
ಶಾಲಾ ವ್ಯಾನ್ ಗೆ ಖಾಸಗಿ  ಬಸ್ ಡಿಕ್ಕಿಯಾದ ಪರಿಣಾಮ  ಎಂಟು ವಿದ್ಯಾರ್ಥಿಗಳು ಸಾವನ್ನಪ್ಪಿದ್ದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತ್ರಾಸಿ ಬಳಿ ಇಂದು ಬೆಳಗ್ಗೆ ಸಂಭವಿಸಿದೆ. ಶಾಲಾ ವಾಹನದಲ್ಲಿ 16 ಮಕ್ಕಳಿದ್ದರು.
 
 
ಅಪಘಾತದಲ್ಲಿ ಎರಡು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಆರು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ಚಿಕಿತ್ಸೆಗಾಗಿ ಕೊಂಡೊಯ್ಯುತ್ತಿದ್ದಾಗ ಮಕ್ಕಳು ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ.
 
 
ಡಾನ್ ಬಾಸ್ಕೋ ಹೈಸ್ಕೂಲಿಗೆ ಸೇರಿದ ಬಸ್ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ 8 ವಿದ್ಯಾರ್ಥಿಗಳಿಗೆ ಗಾಯಾಗಳಾಗಿವೆ. ಗಾಯಾಳು ವಿದ್ಯಾರ್ಥಿ ಗಳನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ, ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.
 
 
ಡೊನ್ ಬೊಸ್ಕೊ ಶಾಲೆಯ ಒಮ್ನಿ ಕಾರು ಹೆಮ್ಮಾಡಿ ಕಡೆಯಿಂದ ಮಕ್ಕಳನ್ನು ಕರೆದುಕೊಂಡು ಶಾಲೆಯತ್ತ ಸಾಗುತ್ತಿತ್ತು. ಈ ವೇಳೆ ಎದುರಿನಿಂದ ಬಂದ ಖಾಸಗಿ ಬಸ್ ಒಮ್ನಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಒಮ್ನಿ ಎದುರಿಗಿದ್ದ ಕಂಬವೊಂದಕ್ಕೆ ಅಪ್ಪಳಿಸಿ ನಜ್ಜುಗುಜ್ಜಾಗಿದೆ. ಮೃತ ಮಕ್ಕಳೆಲ್ಲ ನರ್ಸರಿ, ಎಲ್‌ಕೆಜಿ, ಯುಕೆಜಿ ಮುಂತಾದ ತರಗತಿಗಳಿಗೆ ಸೇರಿದವರು ಎನ್ನಲಾಗಿದೆ.

LEAVE A REPLY

Please enter your comment!
Please enter your name here