ಬಸ್ ಗಳ ಮಧ್ಯೆ ಸಿಲುಕಿ ಚಾಲಕ ಸಾವು

0
422

ಬೆಂಗಳೂರು ಪ್ರತಿನಿಧಿ ವರದಿ
ಬೆಂಗಳೂರಿನಲ್ಲಿ 2 ಬಸ್ ಗಳ ಮಧ್ಯೆ ಸಿಲುಕಿನ ಚಾಲಕ ಸಾವನ್ನಪ್ಪಿದ್ದ ಘಟನೆ ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಬಿಎಂಟಿಸಿ ಬಸ್ ಚಾಲಕ ರಮೇಶ್(42) ಮೃತ ದುರ್ದೈವಿಯಾಗಿದ್ದಾರೆ.
 
 
ಮೃತ ಚಾಲಕ ಇಳಿಜಾರಿನಲ್ಲಿ ಬಿಎಂಟಿಸಿ ಬಸ್ ನಿಲ್ಲಿಸಿದ್ದ. ಬಸ್ ಸ್ಟಾರ್ಟ್ ಮಾಡಿ ಹೊರಭಾಗದ ಮಿರರ್ ಒರೆಸುತ್ತಿದ್ದರು. ಈ ವೇಳೆ ಬಸ್ ಮುಂದೆ ಚಲಿಸಿ ಆಂಧ್ರ ಸಾರಿಗೆ ಬಸ್ ಗೆ ಡಿಕ್ಕಿಯಾಗಿದೆ. ಆಂಧ್ರ ಸಾರಿಗೆ ಬಸ್ ಬಿಎಂಟಿಸಿ ಬಸ್ ಎದುರು ನಿಂತಿತ್ತು. ಈ ವೇಳೆ 2ಬಸ್ ಗಳ ಮಧ್ಯೆ ಸಿಲುಕಿ ರಮೇಶ್ ದುರ್ಮರಣ ಹೊಂದಿದ್ದಾರೆ. ಉಪ್ಪಾರಪೇಟೆ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here