ಬಲವಂತದಿಂದ ಸಿಎಂ ಹುದ್ದೆಯಿಂದ ಕೆಳಗಿಳಿಸಿದ್ದಾರೆ: ಪನ್ನೀರ್ ಸೆಲ್ವಂ

0
513

ಚೆನ್ನೈ ಪ್ರತಿನಿಧಿ ವರದಿ
ನಾನು ಎಐಎಡಿಎಂಕೆ ಪಕ್ಷದ ವಿರುದ್ಧ ಎಲ್ಲೂ ಮಾತನಾಡಿಲ್ಲ. ನನ್ನ ಬಗ್ಗೆ ವಿನಾಕಾರಣ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ ಎಂದು ಹಂಗಾಮಿ ಸಿಎಂ ಓ ಪನ್ನೀರ್ ಸೆಲ್ವಂ ಹೇಳಿದ್ದಾರೆ.
 
 
ಚೆನ್ನೈನಲ್ಲಿ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪನ್ನೀರ್, ನನ್ನನ್ನು ಬಲವಂತದಿಂದ ಸಿಎಂ ಹುದ್ದೆಯಿಂದ ಕೆಳಗಿಳಿಸಿದ್ದಾರೆ. ಪಕ್ಷಕ್ಕೆ ಧಕ್ಕೆಯಾಗುವಂಥ ಯಾವುದೇ ರೀತಿ ಹೇಳಿಕೆ ನೀಡಲ್ಲ. ತಮಿಳುನಾಡಿನಲ್ಲಿ ಕ್ಷಿಪ್ರ ರಾಜಕೀಯ ನಡೆಯುತ್ತಿದೆ. ನನ್ನ ರಾಜೀನಾಮೆಯನ್ನು ವಾಪಸ್ ಪಡೆಯಲು ನಾನು ಸಿದ್ಧನಿದ್ದೇನೆ. ಎಂಜಿಆರ್ ಕನಸಿನಂತೆ ಎಐಡಿಎಂಕೆ ಕಾರ್ಯ ನಿರ್ವಹಿಸಲಿದೆ. ಸದ್ಯದ ಬೆಳವಣಿಗೆಯಲ್ಲಿ ಬಿಜೆಪಿಯ ಯಾವುದೇ ಕೈವಾಡವಿಲ್ಲ ಎಂದಿದ್ದಾರೆ.
 
 
 
ದೇವರಂತಿದ್ದ ಜೆ.ಜಯಲಲಿತಾ ಸಾವಿನ ಬಗ್ಗೆ ನಾನು ತನಿಖೆ ನಡೆಸುತ್ತೇನೆ. ಹೈಕೋರ್ಟ್ ನಿವೃತ್ತ ಜಡ್ಜ್ ನೇತೃತ್ವದ ಸಮಿತಿ ರಚಿಸುತ್ತೇನೆ. ಶೀಘ್ರದಲ್ಲೇ ಜಯ ಸಾವಿನ ಬಗ್ಗೆ ತನಿಖೆಗೆ ಆದೇಶಿಸುತ್ತೇನೆ ಎಂದು ಸೆಲ್ವಳ ಚೆನ್ನೈನಲ್ಲಿ ಘೋಷಣೆ ಮಾಡಿದ್ದಾರೆ.
 
 
ನಮ್ಮಗೆಲ್ಲರಿಗೂ ಜೆ.ಜಯಲಲಿತಾ ದೇವರು ಇದ್ದಂತೆ. ಹಾಗಾಗಿ ಜಯಾ ತೋರಿಸಿಕೊಟ್ಟ ಹಾದಿಯಲ್ಲೇ ನಾನು ನಡೆಯುತ್ತೇನೆ. ಸತ್ಯಂಶ ಏನಿದೆ ಎಂದು ಹೇಳುವುದು ಸರ್ಕಾರದ ಕರ್ತವ್ಯವಾಗಿದೆ. ಕೇಂದ್ರ ಸರ್ಕಾರ ನೆರವು ನೀಡುವುದಾಗಿ ಹೇಳಿದೆ. ತಮಿಳುನಾಡು ವಿಧಾನಸಭೆಯಲ್ಲಿ ನನ್ನ ಬಲ ಪ್ರದರ್ಶಿಸುವೆ. ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಸಾಬೀತುಪಡಿಸುವೆ. ನಾನು ತಮಿಳುನಾಡಿನ ಜನರಿಂದ ಆಯ್ಕೆಯಾಗಿರುವ ಪ್ರತಿನಿಧಿಯಾಗಿದ್ದೇನೆ.ಜನರ ಆಸಯದಂತೆ ನಾನು ನಡೆಯಲೇಬೇಕಿದೆ ಎಂದು ಓ.ಪನ್ನೀರ್ ತಿಳಿಸಿದ್ದಾರೆ.
ಜಯಲಲಿತಾ ಅವರ ಸಂಬಂಧಿ ದೀಪಾ ಬಗ್ಗೆ ನನಗೆ ಅಪಾರ ಗೌರವವಿದ್ದು, ನನ್ನ ಪೂರ್ಣ ಬೆಂಬವಿದೆ ಎಂದು ಪನ್ನೀರ್ ತಿಳಿಸಿದ್ದಾರೆ.
 
ಮಧ್ಯಪ್ರವೇಶ ಮಾಡುವುದಿಲ್ಲ
ತಮಿಳುನಾಡಿನಲ್ಲಿ ಕ್ಷಿಪ್ರ ರಾಜಕೀಯ ಚಟುಚಟಿಕೆ ಹಿನ್ನೆಲೆಯಲ್ಲಿ ತಮಿಳುನಾಡು ರಾಜಕೀಯದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜಸಿಂಗ್ ಸ್ಪಷ್ಟಪಡಿಸಿದ್ದಾರೆ.
 
 
ಶಶಿಕಲಾಗೆ ಸೆಡ್ಡು:
ಹಾಂಗಾಮಿ ಸಿಎಂ ಓ.ಪನ್ನೀರ್ ಸೆಲ್ವ ಅವರು ಶಶಿಕಲಾ ವಿರುದ್ಧ ದಂಗೆಯೆದ್ದಿದ್ದಾರೆ. ಶಶಿಕಲಾಗೆ ಸೆಡ್ಡು ಹೊಡೆಯಲು ಪನ್ನೀರ್ ಸೆಲ್ವಂ ಪಡೆ ಸಿದ್ಧವಾಗಿದೆ. ಪನ್ನೀರ್ ಪರ ಕೆಲವು ಸಂಸದರು ಶಾಸಕರು ನಿಂತಿದ್ದಾರೆ. ಮಾಜಿ ಶಾಸಕ ಸಚಿವರಿಂದಲೂ ಪನ್ನೀರ್ ಗೆ ಬೆಂಬಲ ಸಿಕ್ಕಿದೆ. ಎಐಎಡಿಎಂಕೆ ನಾಯಕರು ಸೆಲ್ವಂ ಬೆನ್ನಿಗೆ ನಿಂತಿದ್ದಾರೆ. ಶಶಿಕಲಾ ವಿರೋಧಿ ಪಡೆಗಳು ಕೂಡ ಪನ್ನೀರ್ ಗೆ ಬೆಂಬಲ ಸೂಚಿಸಿದೆ.

LEAVE A REPLY

Please enter your comment!
Please enter your name here