ಬರ ಚರ್ಚೆಯಲ್ಲಿ ಭರ್ಜರಿ ಊಟ…ಸರಿಯೇ..?

0
524

 
ವಿಶೇಷ ಲೇಖನ
ಕರ್ನಾಟಕದಲ್ಲಿ ಕುಡಿಯಲು ನೀರಿಲ್ಲ… ಮಳೆಯಿಲ್ಲದೆ ಬೆಳೆಯಿಲ್ಲ…ಅಕ್ಷರಶಃ ಜಲಕ್ಷಾಮದಿಂದ ಜನತೆ ಕಂಗೆಟ್ಟು ಹೋಗಿದ್ದಾರೆ. ಆದರೆ ಈ ರಾಜಕಾರಣಿಗಳಿಗೇನು ಚಿಂತೆಯಿಲ್ಲ… ಬರ ಚರ್ಚೆ ಹೆಸರಿನಲ್ಲಿ ಭರ್ಜರಿ ಭೋಜನ ಸವಿ ಸವಿದಿದ್ದಾರೆ. ಇದೆಷ್ಟು ಸರಿ… ನಮ್ಮನ್ನಾರಿಸಿದ ಜನತೆಯ ಕಣ್ಣೀರಿಗೆ ಎಲ್ಲಿದೆ ಬೆಲೆ…? ಜನತೆ ಹೇಗಿದ್ದರೇನು ನಾವು ನೆಮ್ಮದಿಯಿಂದಿದ್ದರೆ ಸಾಕು ಎಂಬ ಭಾವನೆ ನಾವೇ ಆರಿಸಿದ ಜನಪ್ರತಿನಿಧಿಗಳದ್ದು. ಇದಕ್ಕೊಂದು ಸ್ಪಷ್ಟ ನಿದರ್ಶನ ಬುಧವಾರ ಬರಗಾಲದ ಚರ್ಚೆಯ ಹೆಸರಿನಲ್ಲಿ ಭರ್ಜರಿ ಭೋಜನದ ಸವಿಸವಿದದ್ದು ಎಂದರೆ ತಪ್ಪಲ್ಲ.
 
 
 
ಕರ್ನಾಟಕದ ಬರಗಾಲದ ಚರ್ಚೆ ನೆಪದಲ್ಲಿ ಸಭೆ ನಡೆಸಿ ರಾಜ್ಯ ಸಂಸದರು ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ.
ಬುಧವಾರ ಸಂಸತ್ ಬಜೆಟ್ ಅಧಿವೇಶನದ ನಂತರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ದೆಹಲಿ ಕರ್ನಾಟಕ ಭವನದಲ್ಲಿ ರಾಜ್ಯ ಸಂಸದರ ಸಭೆ ನಡೆಯಿತು.ಸಭೆಯಷ್ಟೇ ಆದರೆ ಪರವಾಗಿಲ್ಲ.ಅಲ್ಲಿ ಸಂಸದರಿಗೆ ಪಂಚತಾರಾ ರೀತಿಯ ಔತಣ ಕೂಟ ಏರ್ಪಡಿಸಿದ್ದು ವ್ಯಾಪಕ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಭವನದ ಲಾನ್ ನಲ್ಲಿ ಶಾಮಿಯಾನ ಹಾಕಿ, ಫೈನ್ ಸ್ಟಾರ್ ಹೊಟೇಲ್ ಮಾದರಿಯಲ್ಲಿ ಭೋಜನ ಕೂಟವನ್ನು ಏರ್ಪಡಿಸಲಾಗಿತ್ತು. ರಾಜ್ಯದ ಜನತೆ ನೀರಿಲ್ಲದೆ ಹಪಹಪಿಸುತ್ತಿದ್ದರೂ ರಾಜ್ಯವನ್ನಾಳುವ ನಾಯಕರು ಭೂರಿ ಭೋಜನ ಸವಿದು ಮಜಾ ಮಾಡಿದರು. ಜನರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ ಎಂಬುದಕ್ಕೆ ಇದೊಂದು ಸ್ಪಷ್ಟ ಉದಾಹರಣೆಯಲ್ಲವೇ…?ರಾಜ್ಯದ ಜನತೆಯ ಕುರಿತಾದ ಕಾಳಜಿ-ಜವಾಬ್ದಾರಿ ವಹಿಸಿಬೇಕಾದ ಜನಪ್ರತಿನಿಧಿಗಳ ಇಂತಹ ವರ್ತನೆ ಎಷ್ಟು ಸರಿ…?
 
 
 
ವಾರ್ತೆ ಅಭಿಯಾನ…
ಬರಚರ್ಚೆಯಲ್ಲಿ ಭರ್ಜರಿ ಭೋಜನ ಸವಿದ ಜನಪ್ರತಿನಿಧಿಗಳ ವರ್ತನೆ ಎಷ್ಟು ಸರಿ ? ಜನಸಾಮಾನ್ಯರು ಈ ಬಗ್ಗೆ ಏನನ್ನುತ್ತಾರೆ ಎಂಬುದನ್ನು ರಾಜ್ಯದ ಜನಪ್ರತಿನಿಧಿಗಳಿಗೆ ವಾರ್ತೆ.ಕಾಂ ತಿಳಿಸಲಿದೆ. ಜನತೆ ನಿಮ್ಮ ನೇರ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ವಾರ್ತೆ.ಕಾಂ ನಲ್ಲಿರುವ ಮತಗಟ್ಟೆಯಲ್ಲಿ ನಿಮ್ಮ ಅಭಿಪ್ರಾಯಗಳನ್ನು ನಮೂದಿಸಿ. ನೇರವಾಗಿ ಜನಪ್ರತಿನಿಧಿಗಳಿಗೆ ನಿಮ್ಮ ನಿಲುವನ್ನು ಸ್ಪಷ್ಟಪಡಿಸಿ.

LEAVE A REPLY

Please enter your comment!
Please enter your name here