ಬರವಣಿಗೆಯಲ್ಲಿ ತೊಡಗಿಸಿಕೊಳ್ಳಿ

0
376

 
ಉಜಿರೆ ಪ್ರತಿನಿಧಿ ವರದಿ
ಓದಿನಲ್ಲಿ ಉತ್ತಮ ನಿರ್ಧಾರ ಕೈಗೊಳ್ಳುವಂತಿರಬೇಕು. ಹಾಗೂ ಬರವಣಿಗೆಯ ಅರ್ಥೈಸಿಕೊಳ್ಳುವ ಸಾಮಥ್ರ್ಯ ನಿಮ್ಮಲ್ಲಿ ಇದ್ದರೆ ಭವಿಷ್ಯದಲ್ಲಿ ಉತ್ತಮ ಪತ್ರಿಕೋಧ್ಯಮಿ ಆಗಬಹುದು ಎಂದು ವಿಜಯವಾಣಿಯ ಸೀನಿಯರ್ ಸಬ್ ಎಡಿಟರ್ ಹಾಗೂ ಎಸ್.ಡಿ.ಎಮ್. ಕಾಲೇಜಿನ ಹಳೇ ವಿದ್ಯಾರ್ಥಿ ಗಣೇಶ್ ಶರ್ಮ ನುಡಿದರು.
 
 
ಇತ್ತೀಚೆಗೆ ಅವರು ಉಜಿರೆಯ ಶ್ರೀ ಧ ಮಂ ಕಾಲೇಜಿನ ತೃತೀಯ ಬಿ.ಎ. ಪತ್ರಿಕೋಧ್ಯಮ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿದ್ದರು. ಬರವಣಿಗೆಯಲ್ಲಿ ಆಸಕ್ತಿ ಇದ್ದರೆ ಅದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಭಾಷಾಂತರಕ್ಕೆ ಹೆಚ್ಚಿನ ಮಹತ್ವ ಕೊಡಬೇಕು ಏಕೆಂದರೆ ಈ ಕ್ಷೇತ್ರದಲ್ಲಿ ಅತ್ಯುನ್ನತವಾದ ಅವಕಾಶ ಇದೆ. ಎಂಬ ಕಿವಿಮಾತನ್ನಾಡಿದರು.
 
 
ಪತ್ರಿಕೋಧ್ಯಮದಲ್ಲಿ ಸವಾಲುಗಳು ತುಂಬ ಇರುತ್ತವೆ. ಆದರೆ ಅದನ್ನೆಲ್ಲಾ ನಿಭಾಯಿಸುವ ಸಾಮಥ್ರ್ಯವನ್ನು ಬೆಳೆಸಿಕೊಳ್ಳಬೇಕು. ಜವಾಬ್ದಾರಿಗಳು ಹೆಚ್ಚು ಇರುತ್ತದೆ, ಇದನ್ನೆಲ್ಲಾ ನಿರ್ವಹಿಸಿಕೊಂಡು ಪತ್ರಿಕೆಯನ್ನು ಉನ್ನತಕ್ಕೇರಿಸಬೇಕಾಗುತ್ತದೆ. ಎಂದು ಹೇಳಿದರು.
 
 
ಕಾಲೇಜಿನಲ್ಲಿರುವಾಗಲೇ ಬರವಣಿಗೆಯ ಬಗ್ಗೆ ಗಮನ ಕೊಡಬೇಕು. ಇದು ಮುಂದೆ ನಮಗೆ ವೃತ್ತಿ ಜೀವನದಲ್ಲಿ ಸಹಾಯವಾಗುತ್ತದೆ. ಪತ್ರಿಕೆಯಲ್ಲಿ ಎಷ್ಟು ಹೆಸರುಮಾಡುತ್ತೇವೆಯೋ ಅಷ್ಟು ನಮಗೆ ಒಳ್ಳೆಯದು ಎಂದು ತಿಳಿಸಿದರು.
 
 
ಇದೇ ಸಂದರ್ಭದಲ್ಲಿ ಪತ್ರಿಕೋಧ್ಯಮ ವಿಭಾಗದ ಮುಖ್ಯಸ್ಥ ಪ್ರೋ. ಭಾಸ್ಕರ್ ಹೆಗ್ಡೆ ಉಪಸ್ಥಿತರಿದ್ದು, ತೃತೀಯ ಬಿ.ಎ. ಪತ್ರಿಕೋಧ್ಯಮ ವಿದ್ಯಾರ್ಥಿಗಳು ತಮ್ಮ ಪ್ರಶ್ನೆಗಳನ್ನು ಕೇಳುವುದರ ಮೂಲಕ ತಿಳಿದುಕೊಂಡರು. ಶುಭಶ್ರೀ ವಂದಿಸಿದರು.

LEAVE A REPLY

Please enter your comment!
Please enter your name here