ಬಯಲು ಪ್ರವಾಸ

0
487

 
ವರದಿ-ಚಿತ್ರ: ಶ್ಯಾಮ್ ಪ್ರಸಾದ್, ಬದಿಯಡ್ಕ
ಬದಿಯಡ್ಕದ ಪೆರಡಾಲ ನವಜೀವನ ಶಾಲೆಯ ಯುಪಿ ವಿಭಾಗದ ವಿದ್ಯಾರ್ಥಿಗಳು ಶಾಲಾ ಅಧ್ಯಾಪಕರ ನೇತೃತ್ವದಲ್ಲಿ ತುಳುನಾಡಿನ ಕೃಷಿ ಸೊಬಗನ್ನು ಸವಿಯುವುದಕ್ಕೋಸ್ಕರ ಬಯಲು ಪ್ರವಾಸವನ್ನು ಕೈಗೊಂಡರು.
 
badiyadka_bayalu pravasa
 
 
ಇತ್ತೀಚೆಗೆ ಮುನಿಯೂರು ಬೀಡಿನ ಕಾಯರ್ಕಂಡ ಗದ್ದೆಗೆ ಪ್ರವಾಸ ಕೈಗೊಂಡ ವಿದ್ಯಾರ್ಥಿಗಳು ಕೃಷಿನಿರತರಾಗಿದ್ದವರೊಂದಿಗೆ ಬೆರೆತು ನೇಜಿ ನೆಟ್ಟು ಪಾಡ್ದನ ಹಾಡಿ ಸಂಭ್ರಮಿಸಿದರು. ತುಳುನಾಡಿನ ಗದ್ದೆಬೇಸಾಯದ ಬಗ್ಗೆ ಮುನಿಯೂರು ಬೀಡಿನ ಹಿರಿಯರಲ್ಲೋರ್ವರಾದ ಜತ್ತಪ್ಪ ರೈ ಹಾಗೂ ಉಮೇಶ್ ರೈ ಮೇಗಿನಕಡಾರು ಮಕ್ಕಳಿಗೆ ವಿವರವಾದ ಮಾಹಿತಿ ನೀಡಿದರು.
 
 
ಸುಮಾರು ನೂರರಷ್ಟು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮುನಿಯೂರು ಬೀಡಿನಲ್ಲಿ ತುಳುನಾಡಿನ ವಿಶೇಷ ತಿಂಡಿ ತಿನಿಸುಗಳನ್ನು ಏರ್ಪಡಿಸಿದ್ದರು. ಶಾಲಾ ಶಿಕ್ಷಕರಾದ ನಿರಂಜನ ರೈ ಪೆರಡಾಲ, ಜ್ಯೋತ್ಸ್ನಾ ಕಡಂದೇಲು, ಸೋಮನಾಥ, ಪ್ರಭಾವತಿ ಕೆದಿಲಾಯ ಪುಂಡೂರು ಪ್ರವಾಸದ ನೇತೃತ್ವ ವಹಿಸಿದ್ದರು.

LEAVE A REPLY

Please enter your comment!
Please enter your name here