ಬದುಕು ತೋರಿಸಿದ್ದ ಬಸ್ ಪ್ರಯಾಣ!

0
2744

ಮತ್ತೆ ವೀಕೆಂಡ್ ಬಂಡೆಬಿಡ್ತು ಎಂದು ನಮ್ಮ ಶಿವಮೊಗ್ಗ ದಿಂದ ನಮ್ಮೂರು ಸ್ವಗೃಹ ಇರುವ ಗೌತಮಪುರದ ಕಡೆ ಹೊರಟೆ ಶಿವಮೊಗ್ಗ ಇಂದ ಆನಂದಪುರ ಸರಿಸುಮಾರು 1 ತಾಸಿನ ಪ್ರಯಾಣ ಎಂದಿನಂತೆ ಬಸ್ ಹತ್ತಿ 2 ನಿಮಿಷ ಸೀಟ್ ಎಲ್ಲಿ ಖಾಲಿ ಅಂತಾ ಹುಡುಕುತ್ತಾ ಮುಂದೆ ಬಂದೆ ಎರಡು ಜನ ಕೂರುವ ಬದಿಯಲ್ಲಿ ಸರಿ ಸುಮಾರು 19 ರಿಂದ 21 ವರ್ಷದ ಹೆಣ್ಣುಮಗಳು ಒಂದು 8 ರಿಂದ 10 ತಿಂಗಳ ಮಗುವನ್ನು ಕೂರಿಸ್ಕೊಂಡು ಕೂತಿದ್ಲು ನಾನು ನೋಡಿ ಮಗುನಾ ತೊಡೆ ಮೇಲೆ ಕೂರಿಸ್ಕೊಳಿ ಅಂದೆ, ಪಾಪ ಕೂರಿಸ್ಕೊಂಡ್ಲು ನಾನು ಅಂತೂ ಇಂತೂ ಸೀಟ್ ಸಿಕ್ತು ಅಂತ ನೆಮ್ಮದಿ ಇಂದ ಕೂತೆ, ಯಾಕೋ ತಲೆಲಿ ಅದೇನು ಬಂತೋ ಏನೋ..ಲ್ ಆ ಹೆಣ್ಣುಮಗಳನ್ನು ಗಮನಿಸಿದೆ ಅವಳು ಏನೋ ಪೂರ್ತಿ ಹತಾಶ ಮನೋಭಾವದಿಂದ ಕೂತ ಹಾಗೆ ಅನ್ನಿಸ್ತು ಪಾಪ ಮಾತಾಡಿ ನೋಡಣ ಅನ್ನಿಸ್ತು ಆದ್ರೆ ಯಾರೋ ಏನೋ ಗೊತ್ತಿಲ್ಲ ಎನ್ ತಪ್ಪು ತಿಳಿತಾರೊ ಅನ್ನೋ ವಿಚಾರ ಬೇರೆ ತಲೆಲಿ,ಏನೋ ಧೈರ್ಯ ಮಾಡಿ ಒಮ್ಮೆ ಆಕೆಯನ್ನು ಗಮನಿಸಿ

ಕೇಳಿದೆ ಮಗು ಯಾರಿದ್ದಮ್ಮ…? ಅಂತ ಯಾಕೆ ಈ ಪ್ರೆಶ್ನೆ ಅಂದ್ರೆ ಆಕೆಯ ಕೊರಳಲ್ಲಿ ತಾಳಿಸರನೂ ಇಲ್ಲ ಮದುವೆ ಆಗಿರೋ ವಯಸ್ಸು ಅಲ್ಲ ಆದ್ರೆ ಅಷ್ಟು ಸಣ್ಣ ಹಸಿ ಕೂಸು ತಾಯಿ ಬಿಟ್ಟು ಬೇರೆಯವರ ಜೊತೆ ಅದು ಹೇಗೆ ಬರಲಿಕ್ಕೆ ಸಾದ್ಯ ಅನ್ನೋದು ನನ್ನ ಪ್ರೆಶ್ನೆ ಆಗಿತ್ತು, ನಂಗೆ ಅವಳು ಕೊಟ್ಟ ಉತ್ತರ ‘ಅವಳದೇ ಮಗು’ ಅಂದಳು ಇದು ಇನ್ನೂ ಕೂತೂಹಲಕ್ಕೆ ತರಿಸಿತು ಅದಿಕ್ಕೆ ತಪ್ಪು ತಿಳಿಬೇಡಿ ಹೀಗೆ ಕೇಳ್ತಿರೋದಕ್ಕೆ ಅಂತ ಹೇಳಿ ನಂಬಕ್ಕೆ ಸದ್ಯ ಇಲ್ಲ ಮೇಡಂ ಕೊರಳಲ್ಲಿ ತಾಳಿಸರನು ಇಲ್ಲ ಇಷ್ಟು ಸಣ್ಣವಯಸ್ಸಿಗೆ ಅದ್ರಲ್ಲೂ ಮಗು ನಿಮ್ಮದೆ ಅಂತಿದಿರಲ್ಲಾ , ಅಂತ ಒಂದೇ ಉಸ್ರಲ್ಲಿ ಕೆಳೇಬಿಟ್ಟೆ,
ಅದಿಕ್ಕೆ ಅವಳು, ಇಲ್ಲಾ ಸರ್ ನಾನು 1ಸ್ಟ್ ಇಯರ್ ಡಿಗ್ರಿ ಓದ್ತಾ ಇದ್ದೆ ಅಮ್ಮ ತೀರಿಕೊಂಡರು ಮನೆಕಡೆ ಬೇರೆ ತುಂಬಾ ಸಾಲ ಇತ್ತು ಅಷ್ಟೊತ್ತಿಗೆ ಅವ್ರು ಯಾರೋ ನಮ್ಮ ಸಂಬಂಧಿಕರು ಮನೆಗೆ ಬಂದು ಮಗಳಿಗೆ ಮದುವೆ ಮಾಡು ನಿಂಗೆ ಬೀಗರ ಮನೆಇಂದ ದುಡ್ಡು ಕೊಡ್ತಾರೆ ನೀನು ಆರಾಮಾಗಿ ಇರೋಬಹುದು ಅಂತ ತಲೆಗೆ ತುಂಬಿದ್ರು ಮಾರನೆದಿನಾ ನಾನು ಕಾಲೇಜು ಮುಗ್ಸಿ ಬರೋದ್ರವಳಗೆ ಮದುವೆ ಮಾಡೋಕೆ ಎಲ್ಲಾ ಏರ್ಪಾಡು ಮಾಡಿ ಕಾಲೇಜು ಬಿಡಿಸಿ ಮದುವೆಮಾಡಿದ್ರು ಎರಡೂವರೆ ವರ್ಷ ಆಯ್ತು ಅಷ್ಟೇ ಮದುವೆ ಆಗಿ ಮನೆಯವರು ನೋಡಿದ್ರೆ 18000 ಕೊಟ್ಟಿದೀನಿ ನಿಮ್ಮ ಅಪ್ಪಂಗೆ ಅಂತಾರೆ ಅಪ್ಪಜಿ ನೋಡಿದ್ರೆ 8000 ಅಷ್ಟೇ ಕೊಟ್ಟಿದ್ದು ಅಂದ್ರು ಹೀಗೆ ದಿನ ಕಳೆದ ಹಾಗೆ ನನ್ನ ಮೇಲೆ ಸಿಟ್ಟು ಮಾಡೋಕೆ ಶುರು ಮಾಡಿದ್ರು ಅವರ ತಾಯಿನು ಸಹ ಅವ್ರಿಗೆ ಸಪೋರ್ಟ್ ಕೊಟ್ರು ಮೊನ್ನೆ ಅವರ ಮನೆಯಿಂದ ಹೊರಗೆ ಹಾಕಿದ್ರು ಕಟ್ಟಿರೋ ತಾಳಿಸರನೂ ಕಿತ್ತುಕೊಂಡು ಹೊರಗೆಹಾಕಿದ್ರು ಮತ್ತೆ ಇನ್ನೇನು ಅಂತ ತವರಿಗೆ ಹೋದರೆ ಅಲ್ಲಿ ನನಗೆ ಅಂತ ಮಗಳ ಸ್ಥಾನನು ಇರಲಿಲ್ಲ… ಅಂತಹೇಳಿದ್ರು.
ಅಷ್ಟರಲ್ಲಿಆಗಲೇ ಅವರ ಕಂಬನಿ ಕಣ್ಣಿಂದ ಜಾರಿ ತೊಡೆ ಮೇಲೆ ಪ್ರಪಂಚದ ಅರಿವಿಲ್ಲದೆ ಮಲಗಿದ್ದ ಕಂದನ ಕೆನ್ನೆಯನ್ನು ತೇವ ಗೊಳಿಸಿತ್ತು ಆ ಮಗನು ತಾಯಿಯನ್ನು ‘ಅಮ್ಮಾ ನಿನ್ನ ಜೊತೆಗೆ ನಾನು ಇದ್ದೆ ಇರ್ತೀನಿ’ ಅನ್ನೋರೀತಿಯಲ್ಲಿ ಅದರ ಸಣ್ಣ ಕೈಯಿಂದ ಮುಖ ಮರೆಮಾಡಿಕೊಳ್ಳುತ್ತಾ ಕಣ್ಣು ಪಿಳಿಕಿಸುತ್ತಾಯಿತ್ತು.
ಮತ್ತೆ ಆ ತಾಯಿ ಮುಂದುವರಿದು ಸರ್, ಆ ಕಡೆ ಗಂಡನ ಮನೆನು ಇಲ್ಲ ಈಕಡೆ ತವರು ನನ್ನ ಪಾಲಿಗಿಲ್ಲ ಇಂಥಾ ಸ್ಥಿತಿ ಮಾತ್ರ ಯಾವ ಹೆಣ್ಣಿಗೂ ಬರಬಾರದು ಅಂತ ನಾನು ದಿನಾ ಆ ದೇವರನ್ನು ಕೆಳಕೋತಿನಿ ಅಂದ್ರು. ನಂಗೆ ಇಷ್ಟೆಲ್ಲ ಕೇಳಿ ದ್ವನಿನೆ ಹೊರಡಲಿಲ್ಲ. ಆದರೂ ಆ ಹೆಣ್ಣು ಎಲ್ಲವನ್ನು ಹೇಳಿಕೊಳ್ಳಬೇಕು ಅಂತ ಮನಸಲ್ಲಿ ಗಟ್ಟಿ ನಿರ್ಧಾರನು ಇತ್ತು ಅನ್ನುಸತ್ತೆ , ಸರ್ ಎಲ್ಲಾದರು ಕೆಲಸ ಇದ್ರೆ ಹೇಳಿ ಅಂದ್ರು ಅವತ್ತು ಯಾರೋ ಒಬ್ಬರು ಕಾಲ್ ಮಾಡಿ ಗೊಬ್ಬರದ ಅಂಗಡಿ ಯಲ್ಲಿ ಕಂಪ್ಯೂಟರ್ ವರ್ಕ್ ಗೆ ಬೇಕು ಅಂದಿದ್ದು ನೆನಪಾಯ್ತು ಅವರ ಹತ್ರ ಮಾತಾಡಿ ಅವ್ರಿಗೆ ಕೆಲಸಕ್ಕೆ ಹೋಗೊಕೆ ಒಂದು ಸಣ್ಣ ಮಾರ್ಗ ಮಾಡಿಕೊಟ್ಟೆ ಅಷ್ಟಕ್ಕೇ ಆ ಹೆಣ್ಣು ಮಗಳು ಮತ್ತೆ ದೃಢ ನಿರ್ಧಾರಮಾಡಿ ಮಗನನ್ನು ಕಷ್ಟ ಪಟ್ಟು ಓದುಸ್ತೀನಿ ನನ್ನ ಮಗನನ್ನು ಬೀದಿಪಾಲು ಮಾಡಿದವರ ಮುಂದೆ ತಲೆ ಎತ್ತಿ ನಿಲ್ಲುವಹಾಗೆ ಓದಿಸಿ ಬೆಳೆಸೋದು ನನ್ನ ಜವಾಬ್ದಾರಿ ಅದುನ್ನ ಮಾಡೇ ಮಾಡ್ತೀನಿ ಅಂತ ಒಳ್ಳೆ ನಿರ್ಧಾರ ತಿಳಿಸಿ ಆ ಮಗುವಿಗೆ ಇನ್ನು ನಾಮಕರಣನು ಮಾಡಿಲ್ಲ ಸರ್ ಹೆಸರು ಏನಂತ ಇಡ್ಲಿ ಅಂತ ಕೇಳಿದ್ರು ಅದಿಕ್ಕೆ ಮುಂದೆ ಬರೋ ಎಲ್ಲವನ್ನು ಸ್ವಯಂ ಶಕ್ತಿ ಇಂದ ಎದುರಿಸಬೇಕು ಅದಿಕ್ಕೆ ಸರಿಯಾಗಿ ಒಂದು ಪ್ರೇರಣೆ ಇರತ್ತೆ ಅಂತ ಹೇಳಿ ನಾನು ನೆನ್ನೆ ತಾನೇ ಗೆಳೆಯರ ಹತ್ತಿರ ಕೇಳಿರೋ ಹೊಸ ಹೆಸರು ‘ಸ್ವಯಂ’ ಅದಿಕ್ಕೆ ಸ್ವಯಂ ಅಂತ ಇಡೀ ಚನ್ನಾಗಿರ್ಲಿ ಮಗು.. ಶುಭವಾಗಲಿ ಅಂತ ಹೇಳಿ ನನ್ನ ಕೈ ಸೇರಿದ ಹೊಸ 100 ರೂಪಾಯಿ ನೋಟನ್ನು ಮಗುವಿನ ಕೈ ಯಲ್ಲಿ ಇಟ್ಟು Hope for the Best
ಅಂತ ಹೇಳಿ ನಮ್ಮೂರು ಬಂತು ಇನ್ನೂಮ್ಮೆ ಎಂದಾದರು ಸಿಗೋಣ ಅಂತ ಹೇಳಿ ನಾನು ಬಸ್ ಇಂದ ಇಳಿಯಲು ನನ್ನ ಬ್ಯಾಗ್ ತೆಗೆದುಕೊಂಡು ಹೊರಟೆ ಅಷ್ಟರಲ್ಲಾಗಲೇ ಆ ತಾಯಿಯ ಕಣ್ಣಲ್ಲಿ ಧನ್ಯತಾ ಭಾವವಿತ್ತಲ್ಲಾ ಅದು ನಿಜವಾಗಲು
ನಿಸ್ವಾರ್ಥಮನೋಭಾವನೆ ಏನು ಎಂಬುದನ್ನು ತೋರಿಸಿಕೊಡ್ತು….
ನೋಡಿ ನಮ್ಮೊಂದಿಗೆ ಇಂತಹ ತುಂಬಾ ಕಷ್ಟ ಹಾಗೂ ನೋವಲ್ಲಿ ನರಳುತ್ತಾ ಇರೋರು ತುಂಬಾ ಜನ ಇದಾರೆ ನಾವುಗಳು ನಮ್ಮದೇ ಯಾವ್ದೋ ನೋವು ದೊಡ್ಡ ಪ್ರಪಂಚನೆ ತಲೆಮೇಲೆ ಬಿದ್ದಿದೆ ಅನ್ನೋರೀತಿ ಅಂದುಕೊಂಡು ಬೇರೆ ಯಾರೋ ಎಡವಿದ್ದನ್ನ ನೋಡಿ ನಗ್ತಾ ಕೂತಿರ್ತಿವಿ….
ಇವತ್ತು ಈ ಪರಿಸ್ಥಿತಿಯಲ್ಲಿ ಅವರು ನನಗೆ ನಂಗೆ ಸಿಕ್ಕಿದ್ರು ನಾಳೆ ನಿಮ್ಮಲ್ಲೂ ಯಾರಿಗಾದ್ರು ಇಂತಹಾ ವ್ಯಕ್ತಿಗಳು ಸಿಗಬಹುದು ದಯವಿಟ್ಟು ನಿಮ್ಮಿಂದ ಆದಷ್ಟು ಸಹಾಯ ಮಾಡಿ ಅವರಿಗೂ ಒಂದು ದಾರಿ ತೋರಿಸಿ ಕೊಡಿ…

ಇಂತಿ ತಮ್ಮವ,
ಸಮರ್ಥ ಜಿ ಪ್ರಹಲ್ಲಾದ್ ರಾವ್.

LEAVE A REPLY

Please enter your comment!
Please enter your name here