ಬದನೆಕಾಯಿ ಮೊಸರು ಬಜ್ಜಿ 

0
508

 
ವಾರ್ತೆ ರೆಸಿಪಿ
ಬೇಕಾಗುವ ಸಾಮಗ್ರಿ:
1 ಬದನೆ ಕಾಯಿ, ತೆಂಗಿನ ತುರಿ 1 ಕಪ್, ಮೊಸರು 1 ಕಪ್, ಈರುಳ್ಳಿ ಸಣ್ಣದು 1
ಒಗ್ಗರಣೆಗೆ: ಎಣ್ಣೆ, ಉದ್ದಿನ ಬೇಳೆ, ಎಳ್ಳು – ಚಿಟಿಕೆ, ಹಸಿಮೆಣಸಿನ ಕಾಯಿ 1
 
 
ತಯಾರಿಸುವ ವಿಧಾನ :
ಬದನೇಕಾಯಿಗೆ ಎಣ್ಣೆ ಸವರಿಕೊಂಡು ಒಲೆಯ ಮೇಲಿಟ್ಟು ಚೆನ್ನಾಗಿ ಸುಡಬೇಕು. ಸಿಪ್ಪೆ ಪೂರ್ತಿ ಕಪ್ಪಗಾದರೆ ಒಳಗಡೆ ಬೇಯುತ್ತದೆ. ಹಾಗೆಯೇ ಸುತ್ತಲೂ ಬೇಯಿಸಿ. ತಣ್ಣಗಾದ ಮೇಲೆ ನೀರಿನಲ್ಲಿ ಕೈ ನೆನೆಸಿಕೊಳ್ಳುತ್ತಾ ಸಿಪ್ಪೆ ತೆಗೆಯಿರಿ. ಸೌಟಿನಿಂದ ಹೆಚ್ಚಿಕೊಳ್ಳಿ. ತೆಂಗಿನ ತುರಿಯನ್ನು ನೀರು ಹಾಕಿ ನುಣ್ಣಗೆ ರುಬ್ಬಿಕೊಂಡು ಹೆಚ್ಚಿದ ಬದನೇಕಾಯಿ ಹಾಕಿ, ಮೊಸರು, ಉಪ್ಪು, ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ. ನಂತರ ಎಣ್ಣೆ, ಉದ್ದಿನ ಬೇಳೆ, ಎಳ್ಳು, ಹೆಚ್ಚಿದ ಹಸಿಮೆಣಸಿನ ಕಾಯಿ ಹಾಕಿ ಒಗ್ಗರಣೆ ಮಾಡಿದರೆ ಬದನೇಕಾಯಿ ಮೊಸರು ಬಜ್ಜಿ ಅನ್ನದ ಜೊತೆ ಸವಿಯಲು ಸಿದ್ಧ.

LEAVE A REPLY

Please enter your comment!
Please enter your name here