ಬದನೆಕಾಯಿ ಗೊಜ್ಜು

0
766

ವಾರ್ತೆ ರೆಸಿಪಿ
ಬೇಕಾಗುವ ಸಾಮಗ್ರಿಗಳು:
ಗುಳ್ಳ ಬದನೆ – 1, ಈರುಳ್ಳಿ (ಸಣ್ಣಗೆ ಹೆಚ್ಚಿದ್ದು) – 1 ಕಪ್, ಹಸಿ ಮೆಣಸು- 2 (ಸಣ್ಣಗೆ ಸೀಳಿದ್ದು), ಹುಣಸೆ ಹಣ್ಣಿನ ರಸ- 4 ಚಮಚ, ಬೆಲ್ಲ – ಸ್ವಲ್ಪ, ಉಪ್ಪು – ರುಚಿಗೆ ತಕ್ಕಷ್ಟು, ಎಣ್ಣೆ – 5 ಚಮಚ
ಒಗ್ಗರಣೆಗೆ – ಸ್ವಲ್ಪ ಎಣ್ಣೆ, ಸಾಸಿವೆ, ಹಿಂಗು, ಕರಿಬೇವು, ಬೆಳ್ಳುಳ್ಳಿ
 
 
ತಯಾರಿಸುವ ವಿಧಾನ:
ಬದನೇಕಾಯಿಯನ್ನು ತೊಳೆದುಕೊಂಡು, ಸ್ವಲ್ಪ ಎಣ್ಣೆಯನ್ನು ಸವರಬೇಕು. ನಂತರ ಒಲೆಯ ಕೆಂಡದಲ್ಲಿ ಇಟ್ಟು 5 ನಿಮಿಷಕ್ಕೊಮ್ಮೆ ಬದನೆಕಾಯಿಯ ಬದಿಯನ್ನು ತಿರುಗಿಸುತ್ತಾ ಸಿಪ್ಪೆ ಚೆನ್ನಾಗಿ ಬಾಡುವ ತನಕ ಸುಡಬೇಕು. ಒಲೆ ಇಲ್ಲದಿದ್ದರೆ, ಕಾವಲಿಗೆಯಲ್ಲಿ ಎಣ್ಣೆ ಸವರಿ ಮಾಡಬಹುದು. ಎಲ್ಲಾ ಬದಿಗಳನ್ನು ಸಮವಾಗಿ ಸುಟ್ಟ ನಂತರ, ತಣ್ಣಗೆ ಅದ ಮೇಲೆ, ಸಿಪ್ಪೆಯನ್ನು ಕೈಯಿಂದ ಎಳೆದು ತೆಗೆಯಬೇಕು. ನಂತರ ಇದನ್ನು ಒಂದು ಪಾತ್ರೆಗೆ ಹಾಕಿ, ಕೈಯಿಂದ ಅಥವಾ ಸೌಟಿನ ಸಹಾಯದಿಂದ, ಸಣ್ಣಗೆ ಜಜ್ಜಿ, ಬದಿಯಲ್ಲಿಡಿ. ಇನ್ನು, ಒಂದು ಬಾಣಲೆಗೆ, ಎಣ್ಣೆಯನ್ನು ಹಾಕಿ, ಹಸಿಮೆಣಸು ಸೇರಿಸಿ, ಈರುಳ್ಳಿಯನ್ನು ಚೆನ್ನಾಗಿ ಬಣ್ಣ ಬರುವ ತನಕ ಹುರಿಯಿರಿ. ಕೊನೆಯಲ್ಲಿ ಇದಕ್ಕೆ ಜಜ್ಜಿದ ಬದನೆಕಾಯಿಯನ್ನು ಸೇರಿಸಿ, ಹುಣಸೆ ರಸ, ಸ್ವಲ್ಪ ಬೆಲ್ಲ ಹಾಗು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಸಣ್ಣ ಉರಿಯಲ್ಲಿ, 5 ನಿಮಿಷ ಬೇಯಿಸಿರಿ. ಇದಕ್ಕೆ ಒಗ್ಗರಣೆ ಸೇರಿಸಿ, ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕಾರ ಮಾಡಿ, ಸವಿಯಲು ಕೊಡಿರಿ.
ಇದನ್ನು ಚಪಾತಿ ಅಥವಾ ಅನ್ನದೊಂದಿಗೆ ಉಪಯೋಗಿಸಬಹುದು.

LEAVE A REPLY

Please enter your comment!
Please enter your name here